×
Ad

ದಾರಿಮಿ ಉಲಮಾ ಒಕ್ಕೂಟದಿಂದ ಸಹಾಯ ಹಸ್ತ

Update: 2019-11-06 18:07 IST

ಮಂಗಳೂರು, ನ.5: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಿಂಗಳಾಡಿಯ ಹಮೀದ್ ಮುಸ್ಲಿಯಾರ್‌ರ ಕುಟುಂಬಕ್ಕೆ ಮಂಗಳವಾರ ದಾರಿಮಿ ಉಲಮಾ ಒಕ್ಕೂಟವು ಧನ ಸಹಾಯ ನೀಡಿದೆ.

ಮುಅದ್ದಿನ್ ಆಗಿರುವ ಹಮೀದ್ ಮುಸ್ಲಿಯಾರ್ ಮತ್ತವರ ಪತ್ನಿ ಹಾಗೂ ಏಕೈಕ ಪುತ್ರ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಹಮೀದ್ ಮುಸ್ಲಿಯಾರ್‌ರ ತಂದೆಯೂ ಇತ್ತೀಚೆಗೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಮನೆಯಲ್ಲಿ ಕಣ್ಣು ಕಾಣದ ಸಹೋದರಿ ಮತ್ತು ಬುದ್ದಿಮಾಂದ್ಯ ಸಹೋದರನಿಗೆ ದಿಕ್ಕು ತೋಚದಂತಾಗಿದೆ. ಈ ಬಗ್ಗೆ ಮಾಹಿತಿ ತಿಳಿದುಕೊಂಡ ಒಕ್ಕೂಟದ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಧನ ಸಹಾಯ ನೀಡಿದ್ದಾರೆ.

ಈ ಸಂದರ್ಭ ಎಸ್‌ಬಿ ಮುಹಮ್ಮದ್ ದಾರಿಮಿ ಮುಲ್ಕಿ, ಯುಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಲಬೆಟ್ಟು, ಮಜೀದ್ ದಾರಿಮಿ ಕುಂತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News