×
Ad

ಮಂಗಳೂರು: ನ.9ರಂದು ಸುರಕ್ಷಿತ ಹಣ ಹೂಡಿಕೆ ಯ ಬಗ್ಗೆ ಉಪನ್ಯಾಸ

Update: 2019-11-06 21:47 IST

ಮಂಗಳೂರು, ನ.6: ಮಂಗಳೂರು ಪ್ರೊಡ ಕ್ಟಿವಿಟಿ ಕೌನ್ಸಿಲ್‌ ವತಿಯಿಂದ ನ.9ರಂದು ಸಂಜೆ 5ಗಂಟೆಗೆ ಕೆನರಾ ಕಾಲೇಜು ಸಭಾಂಗಣದಲ್ಲಿ ಸುರಕ್ಷಿತ ಹಣ ಹೂಡಿಕೆ ಯ ಬಗ್ಗೆ ಖ್ಯಾತ ಹಣಕಾಸು ಮತ್ತು ಹೂಡಿಕೆ ಸಲಹೆಗಾರ ಡಾ.ಚಂದ್ರ ಕಾಂತ ಭಟ್ ಉಪನ್ಯಾಸ ನೀಡಲಿದ್ದಾರೆ ಎಂದು ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ನ ಅಧ್ಯಕ್ಷ ಯು.ರಾಮ ರಾವ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ ಆಫ್ ಇಂಡಿಯಾ ದ ಅಧ್ಯಕ್ಷ ಎಸ್.ಎಸ್.ನಾಯಕ್ ವಹಿಸಲಿದ್ದಾರೆ ಎಂದು ಯು.ರಾಮರಾವ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಪಿ.ರವೀಂದ್ರ ರಾವ್,ಉಪಾಧ್ಯಕ್ಷ ರಘುರಾಮ, ಖಜಾಂಚಿ ಚಂದ್ರಶೇಖರ ಮಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News