ಗೃಹರಕ್ಷಕದಳ ಡೆಪ್ಯುಟಿ ಕಮಾಂಡೆಂಟ್‌ಗೆ ರಾಷ್ಟ್ರಪತಿ ಪದಕ
Update: 2019-11-06 21:48 IST
ಮಂಗಳೂರು, ನ.6: ದ.ಕ. ಜಿಲ್ಲಾ ಗೃಹರಕ್ಷಕದಳ ಡೆಪ್ಯುಟಿ ಕಮಾಂಡೆಂಟ್ ಮತ್ತು ಹೆಚ್ಚುವರಿಯಾಗಿ ನಿಯೋಜನೆಗೊಂಡು ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಅವರ ವಿಶಿಷ್ಟ ಸೇವೆಯನ್ನು ಗುರುತಿಸಿ 2017-18ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ನ.8ರಂದು ಬೆಳಗ್ಗೆ 11 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲ ವಜೂಭಾಯಿವಾಲ ಗೌರವಿಸಲಿದ್ದಾರೆ.
ರಮೇಶ್ 2008ರಲ್ಲಿ ರಾಷ್ಟ್ರಪತಿ ಶ್ಲಾಘನೀಯ ಪದಕ, 2008ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಯುವ ವಾಹಿನಿ ಮಂಗಳೂರು 2014ರಲ್ಲಿ ಯುವ ವಾಹಿನಿ ಸಾಧನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದೆ.