×
Ad

ನ.8ರಂದು ಮದ್ದಡ್ಕದಲ್ಲಿ ನೂತನ ಮಸೀದಿ ಉದ್ಘಾಟನೆ

Update: 2019-11-06 22:15 IST

ಬೆಳ್ತಂಗಡಿ: ನೂರುಲ್ ಹುದಾ ಜುಮ್ಮಾ ಮಸ್ಜಿದ್ ಇದರ ವತಿಯಿಂದ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಮದ್ದಡ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಮಸ್ಜಿದ್‌ನ ನ.8 ರಂದು ಮಧ್ಯಾಹ್ನ ಪ್ರಥಮ ಜುಮಾ ನಮಾಝ್‌ನೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಜಮಾಅತ್ ಅಧ್ಯಕ್ಷ ಎಸ್.ಎ ಮುಹಮ್ಮದ್ ರಾಝಿಯುದ್ದೀನ್ ಸಬರಬೈಲು ಮತ್ತು ಸ್ವಾಗತ ಸಮಿತಿ ಚೇರ್‌ಮೆನ್ ತಸ್ಲೀಂ ಆರಿಫ್ ಮದ್ದಡ್ಕ ತಿಳಿಸಿದ್ದಾರೆ.

ಅವರು ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಸ್ಜಿದ್‌ನ ಖಾಝಿಗಳೂ ಆಗಿದ್ದು ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯಾಗಿರುವ ಖರ‍್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಧ್ಯಕ್ಷತೆ ವಹಿಸಲಿದ್ದು,  ಸುಲ್ತಾನುಲ್ ಉಲಮಾ ಕಾಂದಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನೂತನ ಮಸ್ಜಿದ್ ಉದ್ಘಾಟಿಸಲಿದ್ದಾರೆ ಎಂದರು.

ನೂತನ ಮಸ್ಜಿದ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು ಪುರಾತನ ರಾಜಾಡಳಿತ ಕಾಲದ ಶೈಲಿಯ ಒಳವಿನ್ಯಾಸದೊಂದಿಗೆ ರಚಿಸಲಾಗಿದೆ. ತೆರೆದ ಪುಸ್ತಕದ ಮಾದರಿಯ ಪ್ರವೇಶ ದ್ವಾರ ಆಕರ್ಷಕವಾಗಿ ಮೂಡಿಬಂದಿದೆ. ವಿಶಾಲವಾದ ವುಝೂ ಧಾರ್ಮಿಕ ವಿಧಿ ನೆರವೇರಿಸಲು ಹೌಲ್(ಟ್ಯಾಂಕ್), ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒಳಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ತಾ. ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಾದಾತ್ ತಂಙಳ್, ಸಂಯುಕ್ತ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ತಂಙಳ್ ಉಜಿರೆ, ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್, ಕಿಲ್ಲೂರು ತಂಙಳ್, ವಾದಿ ಇರ್ಫಾನ್ ತಂಙಳ್ ಸಹಿತ ಪ್ರಮುಖ ಸಯ್ಯಿದರುಗಳು, ಕಾವಳಕಟ್ಟೆ ಡಾ. ಹಝ್ರತ್ ಸಹಿತ ಹಲವು ಧಾರ್ಮಿಕ ವಿದ್ವಾಂಸರುಗಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರ. ಕಾರ್ಯದರ್ಶಿ ಎನ್‌ಕೆಎಮ್ ಶಾಫಿ ಸಅದಿ, ಜಿಲ್ಲಾ ಸಂಚಾಲಕ ಡಾ. ಅಬ್ದರ‍್ರಶೀದ್ ಝೈನಿ ಕಾಮಿಲ್‌ಸಖಾಫಿ ಕಕ್ಕಿಂಜೆ, ಯೆನಪೊಯ ವಿವಿ ಕುಲಪತಿ ಯೆನೆಪೊಯ ಅಬ್ದುಲ್ಲಕುಂಞಿ, ನಗರಾಭಿವೃದ್ಧಿ ಇಲಾಖೆ ಸರಕಾರದ ಕಾರ್ಯದರ್ಶಿ ಕೆ.ಎ ಹಿದಾಯತುಲ್ಲಾ, ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಮೋನು ಹಾಜಿ ಕಣಚ್ಚೂರು, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಶೇಖ್ ಬಾವಾ ಹಾಜಿ ಸಹಿತ ಪ್ರಮುಖ ಗಣ್ಯರುಗಳು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸ್ವಾಗತ ಸಮಿತಿ ವೈಸ್‌ಚೇರ್‌ಮೆನ್ ಎ ಅಶ್ರಫ್ ಚಿಲಿಂಬಿ ಮದ್ದಡ್ಕ, ಕನ್ವೀನರ್ ಅಬ್ಬೋನು ಮದ್ದಡ್ಕ, ಸಂಚಾಲಕ ಬದ್ರುದ್ದೀನ್ ಆಲಂದಿಲ ಅಧ್ಯಕ್ಷ ಉಸ್ಮಾನ್ ಹಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News