ಗಾಂಜಾ ಸೇವನೆ: ನಾಲ್ವರು ವಶಕ್ಕೆ
Update: 2019-11-06 22:18 IST
ಉಡುಪಿ, ನ.6: ಗಾಂಜಾ ಸೇವನೆಗೆ ಸಂಬಂಧಿಸಿ ನ.3ರಂದು ಮಣಿಪಾಲ ದಲ್ಲಿ ನಾಲ್ಕು ಮಂದಿಯನ್ನು ಉಡುಪಿ ಸೆನ್ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ ಮಾಂಡವಿ ಪ್ಯಾರಡೈಸ್ ಬಳಿ ಪ್ರಣಯ್ ಸಿಂಗ್ ಬಯಾಸ್, ಜೇಸನ್ ಜೋನ್ ಡೇಸ, ಶಿವ ಆದಿತ್ಯ ಮತ್ತು ಮಣಿಪಾಲ ಹಾಟ್ ಅಂಡ್ ಸ್ಪೈಸಿ ಬಳಿ ಆರ್ಯಮಾನ್‌ಝಾ ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಫಾರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿ ಪರೀಕ್ಷೆಗೆ ಒಳ ಪಡಿಸಿದ್ದು, ಅದರಿಂದ ಇವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಸೆನ್ ಪೊಲೀಸರು ತಿಳಿಸಿದ್ದಾರೆ.