ಅತ್ತಾವರ: ಮನೆಗೆ ನುಗ್ಗಿ ನಗ-ನಗದು ಕಳವು
Update: 2019-11-06 22:30 IST
ಮಂಗಳೂರು, ನ.6: ನಗರದ ಅತ್ತಾವರ ಜೈನ್ ಕಾಂಪೌಂಡ್‌ನಲ್ಲಿರುವ ಗೋವಿಯಸ್ ಪಾರಡೈಸ್ ಎಂಬವರ ಮನೆಯಿಂದ ನಗದು ಹಾಗೂ ಇತರ ಸೊತ್ತುಗಳು ಕಳವಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಎದುರಿನ ಕಿಟಕಿಯ ಗ್ರಿಲ್‌ನ್ನು ತುಂಡರಿಸಿ ಮನೆಯ ಒಳಗೆ ಪ್ರವೇಶಿಸಿ ಸೋಫಾದ ಮೇಲಿದ್ದ ಬ್ಯಾಗ್‌ನಿಂದ 6 ಸಾವಿರ ರೂ. ಹಾಗೂ 18 ಸಾವಿರ ರೂ. ಮೌಲ್ಯದ ಒಂದು ಲ್ಯಾಪ್‌ಟಾಪ್ ಹಾಗೂ ಬಾಗಿಲು, ಗೇಟ್ ಮತ್ತು ಕಾರ್‌ನ ಕೀ ಬಂಚ್‌ಗಳನ್ನು ಕಳವುಗೈದಿದ್ದಾರೆ. ಕಳವಾದ ಒಟ್ಟು ಮೌಲ್ಯ 24 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ.