×
Ad

ಮಂಗಳೂರು: ವ್ಯಕ್ತಿ ನಾಪತ್ತೆ

Update: 2019-11-06 22:33 IST

ಮಂಗಳೂರು, ನ.6: ಕಾವೂರು ಸಮೀಪದ ನಿವಾಸಿ ಸೀನ (70) ನಾಪತ್ತೆಯಾಗಿರುವ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಇವರು ಅ.24ರಂದು ಬೆಳಗ್ಗೆ 10 ಗಂಟೆಗೆ ಮನೆಯಿಂದ ಹೋದವರು ಇಲ್ಲಿಯವರೆಗೂ ಮನೆಗೆ ವಾಪಸಾಗಿಲ್ಲ. ನೆರೆಹೊರೆಯವರು, ಸಂಬಂಧಿಕರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ.

ಚಹರೆ: ಸುಮಾರು 5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ, ತುಳು ಮತ್ತು ಕನ್ನಡ ಮಾತನಾಡುತ್ತಾರೆ. ಕೇಸರಿ ಬಣ್ಣದ ಲುಂಗಿ, ನೀಲಿಬಣ್ಣದ ಉದ್ದತೋಳಿನ ಶರ್ಟ್ ಧರಿಸಿದ್ದರು.

ನಾಪತ್ತೆಯಾದ ವ್ಯಕ್ತಿಯ ಮಾಹಿತಿ ಇದ್ದಲ್ಲಿ ಕಾವೂರು ಠಾಣೆ (0824-2220533) ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News