ಜೋಯಲುಕ್ಕಾಸ್‌ನ ಮತ್ತೊಂದು ಕೊಡುಗೆ ಚಿನ್ನಾಭರಣ ಕೊಂಡರೆ ಅಷ್ಟೇ ತೂಕದ ಬೆಳ್ಳಿ ಉಚಿತ
ಮಂಗಳೂರು, ನ.6: ಜೋಯಲುಕ್ಕಾಸ್ ತನ್ನ ಗ್ರಾಹಕರಿಗೆ ‘ಸಂಭ್ರಮವನ್ನು ದ್ವಿಗುಣಗೊಳಿಸಿರಿ’ ಎಂಬ ಹೊಸ ಕೊಡುಗೆಯ ಯೋಜನೆಯನ್ನು ಘೋಷಿಸಿದೆ.
ಈ ಕೊಡುಗೆಯ ಅವಧಿಯಲ್ಲಿ ಪ್ರತೀ ಸ್ವರ್ಣಾಭರಣ ಖರೀದಿಗೂ ಗ್ರಾಹಕರು ಅಷ್ಟೇ ತೂಕದ ಬೆಳ್ಳಿಯನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಸಂಸ್ಥೆ ಘೋಷಿಸಿದೆ.
ಇತ್ತೀಚೆಗೆ ಅನಾವರಣಗೊಳಿಸಿರುವ ಜೋಯಲುಕ್ಕಾಸ್ ಹಬ್ಬದ ಸಂಗ್ರಹದ ಜೊತೆ, ‘ಸಂಭ್ರಮವನ್ನು ದ್ವಿಗುಣಗೊಳಿಸುವ ಕೊಡುಗೆ’ಯು ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಹಳದಿ ಲೋಹವನ್ನು ಬೆಳ್ಳಿಯ ಮಿಂಚಿನೊಂದಿಗೆ ಖರೀದಿಸಲು ಸಕಾಲವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಚಿನ್ನ ಮತ್ತು ಬೆಳ್ಳಿ ಭಾರತದಲ್ಲಿ ಅತೀ ಹೆಚ್ಚು ಇಷ್ಟಪಡುವ ಲೋಹಗಳಾಗಿವೆ. ನಮ್ಮ ಕೊಡುಗೆಯಿಂದ ಗ್ರಾಹಕರು ಎರಡು ಅತ್ಯುತ್ಕೃಷ್ಟ ವಸ್ತುಗಳನ್ನು ಜೊತೆಗೇ ಪಡೆಯಲಿದ್ದಾರೆ. ಸ್ವರ್ಣಾಭರಣ ಖರೀದಿಸಿದಾಗ ಅಷ್ಟೇ ತೂಕದ ಬೆಳ್ಳಿಯನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಜೋಯಲುಕ್ಕಾಸ್ ಸಮೂಹದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಜಾಯ್ ಅಲುಕ್ಕಾಸ್ ಹೇಳಿದ್ದಾರೆ.
ಅಲ್ಲದೆ ಹಬ್ಬದ ಸೀಸನ್‌ನಲ್ಲಿ ಗ್ರಾಹಕರು ತೋರಿದ ಅದ್ಭುತ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದರ ಜೊತೆಗೆ, ಹಬ್ಬದ ಸೀಸನ್‌ನ ವಿಸ್ತೃತ ರೂಪವಾಗಿ ಸಂತಸವನ್ನು ದ್ವಿಗುಣಗೊಳಿಸಿರಿ ಎಂಬ ಯೋಜನೆಯನ್ನು ಗ್ರಾಹಕರ ಮುಂದಿಡಲು ಸಂತಸವಾಗುತ್ತದೆ ಎಂದವರು ಹೇಳಿದ್ದಾರೆ.
ಹೊಸ ಕೊಡುಗೆಯ ಜೊತೆಗೆ, ಗ್ರಾಹಕರು ತಮ್ಮಲ್ಲಿರುವ ಹಳೆಯ ಸ್ವರ್ಣಾಭರಣಗಳನ್ನು ಯಾವುದೇ ಕಡಿತವಿಲ್ಲದೆ ಜೋಯಲುಕ್ಕಾಸ್‌ನ ಬ್ರಾಂಡೆಡ್ ಸ್ವರ್ಣಾಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವಿದೆ. ಅಲ್ಲದೆ ಜೋಯಲುಕ್ಕಾಸ್‌ನಲ್ಲಿ ನಡೆಸುವ ಪ್ರತೀ ಖರೀದಿಯೂ ಒಂದು ವರ್ಷದ ಉಚಿತ ವಿಮೆಯ ಜೊತೆಗೆ, ಜೀವನಪರ್ಯಂತ ಉಚಿತ ನಿರ್ವಹಣೆಯ ಸೌಲಭ್ಯ ಹೊಂದಿರುತ್ತದೆ. ಈ ಕೊಡುಗೆ ಸೀಮಿತ ಅವಧಿಯದ್ದಾಗಿದ್ದು ಗ್ರಾಹಕರು ತಮಗೆ ಸಮೀಪವಿರುವ ಜೋಯಲುಕ್ಕಾಸ್ ಶೋರೂಂಗೆ ಭೇಟಿ ನೀಡಿ ಕೊಡುಗೆಯ ಪ್ರಯೋಜನ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.