ಮಂಗಳೂರು: ಪಡೀಲ್-ಮರೋಳಿ ಬಳಿ ಕಂಟೈನರ್ ಪಲ್ಟಿ
Update: 2019-11-07 15:20 IST
ಮಂಗಳೂರು, ನ.7: ನಗರದ ಪಡೀಲ್-ಮರೋಳಿ ಬಳಿ ಕಂಟೈನರ್ ಪಲ್ಟಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಟೈಲ್ಸ್ ಸಾಗಾಟ ಮಾಡುತ್ತಿದ್ದ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆಯಲ್ಲೇ ಮಗುಚಿ ಬಿದ್ದಿದೆ. ಕಂಟೈನರ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.