ಕಶ್ಯಪ್, ಪ್ರಣೀತ್‌ ಸವಾಲು ಅಂತ್ಯ

Update: 2019-11-08 05:39 GMT

ಫುಝೌ, ನ.7: ಭಾರತೀಯ ಶಟ್ಲರ್‌ಗಳಾದ ಪಾರುಪಲ್ಲಿ ಕಶ್ಯಪ್ ಹಾಗೂ ಬಿ.ಸಾಯಿ ಪ್ರಣೀತ್ ಚೀನಾ ಓಪನ್‌ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಸ್ಪರ್ಧೆಯ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದರು.

ಇಲ್ಲಿ ಗುರುವಾರ ಒಂದು ಗಂಟೆ ಹಾಗೂ 24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಣೀತ್ ಡೆನ್ಮಾರ್ಕ್‌ನ ನಾಲ್ಕನೇ ಶ್ರೇಯಾಂಕದ ಆ್ಯಂಡರ್ಸ್ ಅಂಟೊನ್ಸೆನ್ ವಿರುದ್ಧ ಶರಣಾದರು. ವಿಶ್ವದ ನಂ.11ನೇ ಆಟಗಾರ ಅಂಟೊನ್ಸೆನ್ 20-22, 22-20, 21-16 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಪ್ರಣೀತ್ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಸಿಂಗಲ್ಸ್ ಅಭಿಯಾನ ಅಂತ್ಯವಾಯಿತು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ವಿಶ್ವದ 25ನೇ ರ್ಯಾಂಕಿನ ಆಟಗಾರ ಕಶ್ಯಪ್ ಏಳನೇ ಶ್ರೇಯಾಂಕದ ವಿಕ್ಟರ್ ಅಕ್ಸೆಲ್‌ಸೆನ್ ವಿರುದ್ಧ ಉತ್ತಮ ಆರಂಭ ಪಡೆದಿದ್ದರೂ 43 ನಿಮಿಷಗಳ ಹೋರಾಟದಲ್ಲಿ 13-21, 19-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಕಶ್ಯಪ್ ಈ ವರ್ಷ ಎರಡನೇ ಬಾರಿ ವಿಕ್ಟರ್ ವಿರುದ್ಧ ಸೋಲನುಭವಿಸಿದರು. ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿ ಯನ್ ಕಶ್ಯಪ್ ಈ ವರ್ಷಾರಂಭದಲ್ಲಿ ಇಂಡಿಯಾ ಓಪನ್ ಹಾಗೂ ಕೊರಿಯಾ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ್ದರು. ಈ ವರ್ಷದ ಮಾರ್ಚ್ ನಲ್ಲಿ ಇಂಡಿಯಾ ಓಪನ್‌ನಲ್ಲಿ ವಿಶ್ವದ ನಂ.6ನೇ ಆಟಗಾರ ವಿಕ್ಟರ್‌ಗೆ ಕಶ್ಯಪ್ ಸೋತಿದ್ದರು.

ಮಿಕ್ಸೆಡ್ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಅವರ ಹೋರಾಟವೂ ಅಂತ್ಯವಾಗಿದೆ. ಶ್ರೇಯಾಂಕರಹಿತ ಭಾರತದ ಜೋಡಿ ಐದನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಸೆಯೊ ಸೆವುಂಗ್ ಜಾ ಹಾಗೂ ಚಾ ಯುಜುಂಗ್ ವಿರುದ್ಧ 21-23, 16-21 ಗೇಮ್‌ಗಳ ಅಂತರದಿಂದ ಸೋತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News