ಪ್ರತಿ ಐಪಿಎಲ್ ಪಂದ್ಯಕ್ಕಿಂತ ಮೊದಲು ರಾಷ್ಟ್ರಗೀತೆ

Update: 2019-11-08 05:43 GMT

ಹೊಸದಿಲ್ಲಿ,ನ.7: ಮುಂಬರುವ 2020ರ ಆವೃತ್ತಿಯ ಐಪಿಎಲ್‌ನ ಪ್ರತಿ ಪಂದ್ಯದ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ನುಡಿಸಬೇಕೆಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕ ನೆಸ್ ವಾಡಿಯಾ ಬಿಸಿಸಿಐಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸಾಮಾನ್ಯವಾಗಿ ಪ್ರತಿ ಅಂತರ್‌ರಾಷ್ಟ್ರೀಯ ಪಂದ್ಯದ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ವಿಶ್ವದ ನಂ.1 ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಇದನ್ನು ನಿಯಮವಾಗಿ ಅಳವಡಿಸಬೇಕು ಎಂದು ವಾಡಿಯಾ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಭಾರೀ ವೆಚ್ಚದ ಉದ್ಘಾಟನಾ ಸಮಾರಂಭವನ್ನು ರದ್ದುಪಡಿಸುವ ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದ ವಾಡಿಯಾ, ಇದೊಂದು ಉತ್ತಮ ಹೆಜ್ಜೆ. ಉದ್ಘಾಟನಾ ಸಮಾರಂಭದ ವೌಲ್ಯ ಹಾಗೂ ಅಗತ್ಯತೆಯ ಬಗ್ಗೆ ನಾನು ಯಾವಾಗಲೂ ಅಚ್ಚರಿ ವ್ಯಕ್ತಪಡಿಸುತ್ತಿದ್ದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರತಿ ಪಂದ್ಯಕ್ಕೆ ಮೊದಲು ರಾಷ್ಟ್ರೀಯ ಗೀತೆಯನ್ನು ನುಡಿಸುವ ನಿಟ್ಟಿನಲ್ಲಿ ಬಿಸಿಸಿಐ ಹೆಜ್ಜೆ ಇಡಬೇಕಾಗಿದೆ ಎಂದರು. ಇಂಡಿಯನ್ ಸೂಪರ್ ಲೀಗ್(ಫುಟ್ಬಾಲ್)ಹಾಗೂ ಪ್ರೊ ಕಬಡ್ಡಿ ಲೀಗ್‌ನಲ್ಲಿ ರಾಷ್ಟ್ರೀಯ ಗೀತೆ ನುಡಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News