ಆರೆಸ್ಸೆಸ್ ಮಾತುಗಳ ಬದಲಿಗೆ ಕೃತಿಯಲ್ಲೂ ಶಾಂತಿ, ಸಾಮರಸ್ಯಕ್ಕೆ ತನ್ನ ಬದ್ಧತೆಯನ್ನು ಸಾಬೀತುಪಡಿಸಲಿ: ಪಾಪ್ಯುಲರ್ ಫ್ರಂಟ್

Update: 2019-11-08 11:03 GMT

ಮಂಗಳೂರು: ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಮುಸ್ಲಿಮರ ಗುಂಪೊಂದರ ಜೊತೆ ಆಯೋಜಿಸಿದ್ದ ಸಭೆಯಲ್ಲಿ ಆರೆಸ್ಸೆಸ್ ನಾಯಕರು ನೀಡಿದ ಭರವಸೆಗಳು ಮತ್ತು ಮುಂದಿಟ್ಟ ಪ್ರಸ್ತಾಪಗಳನ್ನು ಗಮನಿಸುತ್ತಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ, ಆರೆಸ್ಸೆಸ್ ತನ್ನ ಮೂಲಭೂತ ವೈಚಾರಿಕ ದಾಖಲೆಗಳನ್ನು ಹಿಂಪಡೆಯುವ ತನಕ ಮತ್ತು ತಮ್ಮ ಐತಿಹಾಸ ಪ್ರಮಾದಗಳಿಗಾಗಿ ಕ್ಷಮೆ ಕೋರುವ ವರೆಗೆ ಧಾರ್ಮಿಕ ಅಲ್ಪಸಂಖ್ಯಾತರ ವಿಶ್ವಾಸವನ್ನು ಗಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆರೆಸ್ಸೆಸ್ ಭಾರತೀಯ ಮುಸ್ಲಿಮರಿಗೆ ಕೋಮು ಸೌಹಾರ್ದ ಮತ್ತು ನ್ಯಾಯಾಂಗದ ಗೌರವದ ಕುರಿತು ಪಾಠ ಹೇಳುವ ಯಾವುದೇ ನೈತಿಕತೆಯನ್ನು ಹೊಂದಿಲ್ಲ. ಯಾಕೆಂದರೆ, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವ ಕುರಿತು ಮುಸ್ಲಿಮರು ಯಾವುದೇ ಇತಿಹಾಸವನ್ನು ಹೊಂದಿಲ್ಲ ಎಂದೂ ಅವರು ಹೇಳಿದ್ದಾರೆ.

ಆರೆಸ್ಸೆಸ್ ನಾಯಕರು ಮುಸ್ಲಿಮರ ಮುಂದೆ ನ್ಯಾಯಾಂಗ ಮತ್ತು ಕಾನೂನು ಸುವ್ಯವಸ್ಥೆಯನ್ನು ಗೌರವಿಸುವಂತೆ ಉಪನ್ಯಾಸ ನೀಡುತ್ತಿದ್ದಾರೆ. ಆದರೆ ಬಾಬರಿ ಮಸ್ಜಿದ್ ನ ಒಳಗಡೆ ಬಲವಂತದಿಂದ ಮತ್ತು ಅಕ್ರಮವಾಗಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮತ್ತು ಬಾಬರಿ ಮಸ್ಜಿದ್ ಧ್ವಂಸಕ್ಕೆ ಮೊದಲು ಹಾಗೂ ನಂತರದಿಂದ ಈ ವರೆಗಿನ ಈ ಎಲ್ಲಾ ವರ್ಷಗಳಲ್ಲೂ ಮುಸ್ಲಿಮರು ಎಂದಿಗೂ ನ್ಯಾಯಾಂಗದ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ ಮತ್ತು ಅವರು ಇವತ್ತಿಗೂ ಅದೇ ನಂಬಿಕೆ ಹಾಗೂ ಭರವಸೆಯಲ್ಲಿ ದೃಢವಾಗಿದ್ದಾರೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ ಎಂದರು.

ಮುಸ್ಲಿಮರು ಮತ್ತು ತನ್ನ ನಡುವಿನ ಅಂತರವನ್ನು ಕಡಿಮೆಗೊಳಿಸಲು ಆರೆಸ್ಸೆಸ್ ಗೆ ಒಂದೇ ಹಾದಿಯೆಂದರೆ, ಅದು ತನ್ನ ಮೂಲಭೂತ ವಿಚಾರಧಾರೆ ಮತ್ತು ಹಿಂಸಾತ್ಮಕ ವಿಧಾನಗಳನ್ನು ಶಾಶ್ವತವಾಗಿ ತೊರೆಯಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ತಮ್ಮ ನಂಬಿಕೆ ಮತ್ತು ಗುರಿಯ ಪ್ರಕಾರ, ಭಾರತದಲ್ಲಿ ಮುಸ್ಲಿಮರು ಸ್ವತಃ ತಮ್ಮ ಸಮುದಾಯದ ಹೊರತಾಗಿ ಬಹುಸಂಖ್ಯಾತ ಸಮುದಾಯದೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಬಲಪಡಿಸುವ ಮತ್ತು ಮೈತ್ರಿಯನ್ನು ಸ್ಥಾಪಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಆದುದರಿಂದ ಮುಸ್ಲಿಮ್ ನಾಯಕರು ಯಾವುದೇ ವರ್ಗದ ಮೂಲಕ ಇತರ ಸಮುದಾಯಗಳ ಜೊತೆಗೂಡಿ ಶಾಂತಿ ಮತ್ತು ಸಾಮರಸ್ಯಕ್ಕಾಗಿ ನಡೆಸುವ ಎಲ್ಲಾ ಪ್ರಯತ್ನಗಳನ್ನು ಸ್ವಾಗತಿಸಬೇಕು ಹಾಗೂ ಬೆಂಬಲಿಸಬೇಕಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಮತ್ತು ಎಲ್ಲಾ ಜನರೊಂದಿಗೂ ಮಾತುಕತೆಯ ಹಾದಿಯನ್ನು ಮುಕ್ತವಾಗಿರಿಸಬೇಕಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರಯತ್ನಗಳು ಲಾಭದಾಯಕವಾಗಬೇಕಾದರೆ, ದ್ವೇಷ ಮತ್ತು ಹಿಂಸಾಚಾರವನ್ನು ಬೋಧಿಸುವವರು ನ್ಯಾಯಸಮ್ಮತ ಮತ್ತು ಅಧಿಕಾರದೊಂದಿಗೆ ಸ್ವಯಂ ನೇಮಕಗೊಂಡು ತಾವು ಸಲಹೆಗಾರರ ಪಾತ್ರವನ್ನು ವಹಿಸಬಾರದು ಅನ್ನುವುದು ಮಹತ್ವ ವಿಚಾರವಾಗಿದೆ. ಒಂದು ವೇಳೆ ಕೇಂದ್ರ ಸರಕಾರ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಅಲ್ಪಸಂಖ್ಯಾತ ಸಮುದಾಯಗಳ ನಂಬಿಕೆಯನ್ನು ಗೆಲ್ಲುವ ವಿಚಾರದ ಬಗ್ಗೆ ಗಂಭೀರವಾಗಿದ್ದರೆ, ಅದು ಆರೆಸ್ಸೆಸ್ ನ ಸಾರ್ವಜನಿಕ ಸಂಪರ್ಕದ ಅಜೆಂಡಾವನ್ನು ಸುಗಮಗೊಳಿಸುವುದರ ಬದಲಿಗೆ ಅಲ್ಪಸಂಖ್ಯಾತರ ಅಸ್ತಿತ್ವ ಮತ್ತು ಅಭಿವೃದ್ಧಿಯ ವಿಚಾರದ ಕಡೆಗೆ ಗಮನಹರಿಸುವ ಅಗತ್ಯವಿದೆ ಎಂದು ಮುಹಮ್ಮದ್ ಅಲಿ ಜಿನ್ನಾ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News