ತುಂಬೆ ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್‍ನ ಸಮಾಲೋಚನಾ ಸಭೆ

Update: 2019-11-08 11:40 GMT

ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಸಹಯೋಗದೊಂದಿಗೆ ತುಂಬೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ರಚಿತವಾದ ಇಂಟರ್ಯಾಕ್ಟ್ ಕ್ಲಬ್‍ನ ಸಮಾಲೋಚನಾ ಸಭೆಯನ್ನು ಇತ್ತೀಚೆಗೆ ನಡೆಯಿತು.

ಸಂಸ್ಥೆಯ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಈ ಕ್ಲಬ್‍ನ ಪ್ರಯೋಜನವನ್ನು ಜೀವನದಲ್ಲಿ ಅಳವಡಿಸುವಂತೆ ಕಿವಿಮಾತನ್ನು ಹೇಳಿದರು.  ಸಮಾಜಸೇವೆಯೇ ಗುರಿಯಾಗಿರುವ ರೋಟರಿ ಸಂಸ್ಥೆ, ಆದರ್ಶ ಸಂಸ್ಥೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ಜಯರಾಜ್ ಮಾತನಾಡಿ, ವಿದ್ಯಾರ್ಥಿಗಳು ಸಂಯಮ, ಧೈರ್ಯ, ಸಹನೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಕ್ಲಬ್‍ಗಳು ಬಹಳ ಸಹಕಾರಿ ಎಂದು ತಿಳಿಸಿದರು.

ರೋಟರಿ ಕ್ಲಬ್ ಬಂಟ್ವಾಳ ಟೌನ್‍ನ ವೆಬ್‍ಚೆಯೆರ್‍ಮೆನ್ ಆಗಿರುವ ಆಶಾಮಣಿ ರೈ ಮಾತನಾಡಿ, ಕ್ಲಬ್‍ನ ಒಳ್ಳೆಯ ಅಂಶಗಳನ್ನು ವಿದ್ಯಾರ್ಥಿಗಳು ಅಳವಡಿಕೊಲ್ಳುವಂತೆ ಸೂಚಿಸಿದರು.  ಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್‍ನ ನಿರ್ದೇಶಕರಾಗಿರುವ ಅಧ್ಯಾಪಕ ಶ್ರೀ ನವೀನ ರಾವ್ ಟಿ. ಇವರು ಸಭೆಯಲ್ಲಿ ಉಪಸ್ಥಿತರಿದ್ದರು.

ಅದೇ ರೀತಿ ಇಂಟರ್ಯಾಕ್ಟ್ ಕ್ಲಬ್‍ನ ಅಧ್ಯಕ್ಷ ಮುಹಮ್ಮದ್ ಸಲ್ವಾನ್, ಕಾರ್ಯದರ್ಶಿ ಸಾಗರ್ ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಕ್ಲಬ್‍ನ ಸದಸ್ಯೆ  ಮುಫೀದಾ ಸ್ವಾಗತಿಸಿ, ಫರೀನಾ ವಂದಿಸಿ, ಶ್ರೇಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News