ದೇರಳಕಟ್ಟೆ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್‌ಗೆ ಆಯ್ಕೆ

Update: 2019-11-08 13:00 GMT
ಇಸ್ಮಾಯೀಲ್ ಹಾಜಿ ದೇರಳಕಟ್ಟೆ, ಇಬ್ರಾಹೀಂ ಕೊಣಾಜೆ
 

ದೇರಳಕಟ್ಟೆ, ನ.8: ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ದೇರಳಕಟ್ಟೆ ರೇಂಜ್ ಇದರ ಮಹಾಸಭೆಯು ಇತ್ತೀಚೆಗೆ ದೇರಳಕಟ್ಟೆಯ ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಜರುಗಿತು.

ಸೈಯದ್ ಅಮೀರ್ ತಂಙಳ್ ಕಿನ್ಯಾ ದುಆಗೈದರು. ಸಮಸ್ತ ಕರ್ನಾಟಕ ಮುಶಾವರ ಉಪಾಧ್ಯಕ್ಷ ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ಸಭೆ ಯನ್ನು ಉದ್ಘಾಟಿಸಿದರು.

ಅತಿಥಿಗಳಾಗಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಮುದರ್ರಿಸ್ ರಿಯಾಝ್ ರಹ್ಮಾನಿ, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಸದಸ್ಯ ಅಬ್ದುಲ್ ರಹ್ಮಾನ್ ದಾರಿಮಿ (ತಬೂಕ್ ದಾರಿಮಿ), ದ.ಕ.ಜಿಲ್ಲಾ ಮದರಸ ಮ್ಯಾನೇಜ್ಮೆಂಟ್‌ನ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ, ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ಕಾರ್ಯದರ್ಶಿ ಇರ್ಫಾನ್ ಮೌಲವಿ, ಕೋಶಾಧಿಕಾರಿ ಪಿ.ಎಂ. ಅಬ್ದುಲ್ ರಹ್ಮಾನ್ ಹಾಜಿ ಪನೀರ್, ಸೃಳೀಯ ಮಸೀದಿಯ ಅಧ್ಯಕ್ಷ ಅಬ್ಬಾಸ್ ಹಾಜಿ, ಸದರ್ ಉಸ್ತಾದ್ ಅಬ್ದುಲ್ಲಾ ಮೌಲವಿ, ಮುಅದ್ದಿನ್ ಅಯ್ಯೂಬ್ ಮೌಲವಿ ಉಪಸ್ಥಿತರಿದ್ದರು. ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.

ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್‌ನ ವರ್ಕಿಂಗ್ ಕಾರ್ಯದರ್ಶಿ ಹಕೀಮ್ ಪರ್ತಿಪ್ಪಾಡಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಗೌರವಾಧ್ಯಕ್ಷರಾಗಿ ಮಜಲ್ ಅಬ್ಬಾಸ್ ಹಾಜಿ ಅಧ್ಯಕ್ಷರಾಗಿ ಇಸ್ಮಾಯೀಲ್ ಹಾಜಿ ದೇರಳಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಕೊಣಾಜೆ, ಕೋಶಾಧಿಕಾರಿಯಾಗಿ ಮೊಹಿದೀನ್ ಬಾವು ಮರಾಠಿಮೂಲೆ, ವರ್ಕಿಂಗ್ ಕಾರ್ಯದರ್ಶಿಯಾಗಿ ಎಸ್.ಬಿ.ಹನೀಫ್, ಉಪಾಧ್ಯಕ್ಷರಾಗಿ ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಕಿನ್ಯಾ, ಸ್ವಾಗತ್ ಅಬೂಬಕರ್ ಹಾಜಿ, ಅಶ್ರಫ್ ಮರಾಠಿಮೂಲೆ, ಹಸೈನಾರ್ ಅಸೈ ಮದಕ, ಕಾರ್ಯದರ್ಶಿಯಾಗಿ ಸಿ.ಎಂ. ಶರೀಫ್ ಪಟ್ಟೋರಿ, ಅಬ್ದುಲ್ ರಝಾಕ್ ಕುಂಡೂರ್, ಪತ್ರಿಕಾ ಕಾರ್ಯದರ್ಶಿಯಾಗಿ ಸಿರಾಜ್ ಅರ್ಕಾಣ ಮತ್ತು ರೇಂಜ್ ವ್ಯಾಪ್ತಿಯ 38 ಮದ್ರಸಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News