ಬಾಲಕಿಯ ಜೊತೆಗಿದ್ದ ಯುವಕನ ಥಳಿಸಿ ಹತ್ಯೆ

Update: 2019-11-08 15:06 GMT

ಚಂಡೀಗಢ,ನ.8: ಯುವಕನೊಬ್ಬನ ಮೋಟಾರ್ ಸೈಕಲ್‌ನಲ್ಲಿ ಬಾಲಕಿಯು ಕುಳಿತಿರುವುದನ್ನು ಕಂಡು ಕೆರಳಿದ ಆಕೆಯ ಕುಟುಂಬದ ಸದಸ್ಯರೆನ್ನಲಾದವರು, ಯುವಕನನ್ನು ಥಳಿಸಿ ಹತ್ಯೆಗೈದ ಘಟನೆ ಹರ್ಯಾಣದ ರೋಹ್ಟಕ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

  15 ವರ್ಷ ವಯಸ್ಸಿನ ಬಾಲಕಿಯು ಬುಧವಾರ ಗ್ರಾಮದ ಯುವಕನೊಬ್ಬನೊಂದಿಗೆ ಬೈಕ್‌ನಲ್ಲಿ ಕುಳಿತಿರುವುದನ್ನು ಆಕೆಯ ಕುಟುಂಬಿಕರು ಕಂಡಿದ್ದರು. ಕೆರಳಿದ ಅವರು ಯುವಕನ್ನು ಬಲವಂತವಾಗಿ ಹತ್ತಿರದ ಹೊಲಮನೆಯೊಂದಕ್ಕೆ ಎಳೆದೊಯ್ದರು ಹಾಗೂ ಅಲ್ಲಿ ಆತನನ್ನು ಲಾಠಿಗಳಿಂದ  ಥಳಿಸಿ ಗಾಯಗೊಳಿಸಿದ್ದರು.

 ಆನಂತರ ಅವರು ಯುವಕನ ಕುಟುಂಬಿಕರನ್ನು ಕರೆದು, ಆತನನ್ನು ಕೊಂಡೊಯ್ಯುವಂತೆ ತಿಳಿಸಿದರು. ಆದರೆ ಗಂಭೀರ ಗಾಯಗೊಂಡಿದ್ದ ಯುವಕ ಸ್ವಲ್ಪ ಸಮಯದ ಬಳಿಕ ಕೊನೆಯುಸಿರೆಳೆದ ಎಂದು ರೋಹ್ಟಕ್‌ನ ಹಿರಿಯ ಠಾಣಾಧಿಕಾರಿ ಜಸ್ವಂತ್ ಸಿಂಗ್ ತಿಳಿಸಿದ್ದಾರೆ.

ಯುವಕನ ಕುಟುಂಬಿಕರು ನೀಡಿದ ದೂರನ್ನು ಆಧರಿಸಿ ಬಾಲಕಿಯ ಕುಟುಂಬದ ಕೆಲವು ಸದಸ್ಯರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ, ಆಕೆಯ ತಂದೆ, ತಾತ ಹಾಗೂ ಕುಟುಂಬದ ಇತರ ಕೆಲವು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೆಂದು ಜಸ್ವಂತ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News