ಅಕ್ರಮ ಮತದಾನ ತಡೆಯಲು ಬಜಾಲ್ ನಲ್ಲಿ ಜಾಗೃತ ದಳ ರಚನೆ
Update: 2019-11-08 21:29 IST
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಅಕ್ರಮ ಮತದಾನ ಮತ್ತು ಅಕ್ರಮ ಮದ್ಯ ಹಂಚುವಿಕೆಯನ್ನು ತಡೆಯಲು ಸಿಪಿಐಎಂ ಪಕ್ಷ 53 ನೇ ಬಜಾಲ್ ವಾರ್ಡ್ ನಲ್ಲಿ 40 ಮಂದಿಯ ಜಾಗೃತದಳವನ್ನು ರಚಿಸಿದೆ ಎಂದು ವಾರ್ಡ್ ಚುನಾವಣಾ ಉಸ್ತುವಾರಿ ಹೊತ್ತಿರುವ ಸಂತೋಷ್ ಬಜಾಲ್ ತಿಳಿಸಿದ್ದಾರೆ.
ಒಂದು ತಂಡದಲ್ಲಿ ತಲಾ 10 ಮಂದಿಯಂತೆ 40 ಜನರ 4 ತಂಡಗಳನ್ನು ರಚಿಸಲಾಗಿದ್ದು ಇವು ಹಗಲು ರಾತ್ರಿ ಕ್ಷೇತ್ರದಲ್ಲಿ ಅಕ್ರಮ ಮದ್ಯ , ಹಣ ಹಂಚುವಿಕೆಯ ಮೇಲೆ ನಿಗಾ ಇಡಲಿದ್ದು ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮತ್ತು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.