ಬಜ್ಪೆ : ಅಪರಿಚಿತ ಮೃತದೇಹ ಪತ್ತೆ
Update: 2019-11-08 22:50 IST
ಬಜ್ಪೆ : ಮಳವೂರು ಬಳಿಯ ಫಲ್ಗುಣಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಕಳೆದ ಮಂಗಳವಾರದಂದು ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಎರಡು ಮೂರು ದಿನಗಳ ಹಿಂದೆ ಕಾಲುಜಾರಿ ಅಥವಾ ನದಿಗೆ ಹಾರಿ ಆತ್ಮಹತ್ಯೆಗೈದಿರುವ ಬಹುದೆಂದು ಅಂದಾಜಿಸಲಾಗಿದೆ.
ಮೃತವ್ಯಕ್ತಿಯು ಸುಮಾರು 55 ವರ್ಷದವರಾಗಿದ್ದು, ಕಪ್ಪುಬಣ್ಣದ ಪ್ಯಾಂಟ್ ಮತ್ತು ಖಾಕಿ ಬಣ್ಣದ ನೀಲಿ ಗೆರೆಗಳಿರುವ ಉದ್ದತೋಳಿನ ಟೀ ಶರ್ಟ್ ಧರಿಸಿದ್ದಾರೆ . ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಾರೀಸುದಾರರು ಯಾರಾದರು ಇದ್ದರೆ ಬಜ್ಪೆ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.