ಪಂಚಾಯತ್‍ರಾಜ್ ಕಾಯ್ದೆಗೆ ತಿದ್ದುಪಡಿ: ಸಚಿವ ಕೆ.ಎಸ್.ಈಶ್ವರಪ್ಪ

Update: 2019-11-08 17:32 GMT

ಬಂಟ್ವಾಳ, ನ. 8: ಗ್ರಾಮ ಪಂಚಾಯತ್‍ಗಳು, ಸದಸ್ಯರು ಹಾಗೂ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ತಜ್ಞರೊಂದಿಗೆ ಸಲಹೆ ಪಡೆದು ಪಂಚಾಯತ್‍ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಬಂಟ್ವಾಳ ತಾಲೂಕು ಪಂಚಾಯತ್ ಆಶ್ರಯದಲ್ಲಿ ಶುಕ್ರವಾರ ನಡೆದ ದ.ಕ.ಜಿಲ್ಲೆಯ ಎಲ್ಲ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಚಿಂತನ-ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಸ್ತಾಪಿಸಿದ ಸಿಬ್ಬಂದಿ ಕೊರತೆ, ವೇತನ ಪರಿಷ್ಕರಣೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಅದಲ್ಲದೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಡಳಿತ ವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಿಬ್ಬಂದಿ ಕೊರತೆ ನೀಗಿಸಲಾಗವುದು ಎಂದರು.

ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನದಲ್ಲಿರುವ ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಮೊದಲ ಆಧ್ಯತೆ ನೀಡಲಾಗುವುದು ಎಂದ ಅವರು, ಆ ಮೂಲಕ ದ.ಕ. ಜಿಲ್ಲೆಯನ್ನು ರಾಜ್ಯಕ್ಕೆ ಮನಾದರಿಯಾಗುವ ರೀತಿಯಲ್ಲಿ ರೂಪಿಸುವ ಜೊತೆಗೆ ಜಿಲ್ಲೆಯ ನುರಿತರ ಯಶೋಗಾಧೆಗಳನ್ನು ರಾಜ್ಯ ಮಟ್ಟದಲ್ಲಿ ಹಂಚಿಕೊಳ್ಳು ವೇದಿಕೆ ಒದಗಿಸಲಾಗುವುದು ಎಂದರು.

ಪ್ರತೀ ಗ್ರಾಮಮಟ್ಟದಲ್ಲಿ ಸ್ಮಶಾನದ ಅವಶ್ಯವಿದ್ದು, ಸ್ಮಶಾನ ನಿರ್ಮಾಣಕ್ಕಾಗಿ ಜಮೀನು ಗುರುತಿಸುವಂತೆ, ಸರಕಾರಿ ಜಮೀನು ಇಲ್ಲದೇ ಇದ್ದಲ್ಲಿ ಖಾಸಗಿ ಜಾಗವನ್ನು ಅವಕಾಶವಿದೆ. ಸ್ಮಶಾನ ನಿರ್ಮಾಣಕ್ಕೆ ಅಗತ್ಯ ನೆರವನ್ನು ಗ್ರಾಮಪಂಚಾಯತ್‍ನ ಉದ್ಯೋಗ ಖಾತ್ರಿ ಸಹಿತ ಇತರ ನಿಧಿಗಳಿಂದ ಒದಗಿಸಲಾಗುವುದು ಎಂದವರು ಹೇಳಿದರು.

ರಾಜ್ಯದಲ್ಲಿ ಗ್ರಾಮಪಂಚಾಯತ್‍ಗಳು ಎದುರಿಸುತ್ತಿರುವ ವಿದ್ಯುತ್ತಿನ ಕೊರತೆಯನ್ನು ನೀಗಿಸಲು, ರಾಜ್ಯದ ಎಲ್ಲಾ 6,021 ಗ್ರಾಪಂ ಕಟ್ಟಡಗಳನ್ನು ಮುಂದಿನ ಒಂದು ವರ್ಷ ಒಳಗಾಗಿ ಸೋಲಾರ್ ವಿದ್ಯುತ್ ಅನ್ನು ಅಳವಡಿಸಲಾಗುವುದು ಎಂದರು.

ಬಂಟ್ವಾಳ ಬಹುಗ್ರಾಮಕ್ಕೆ ಹೆಚ್ಚುವರಿ 45 ಕೋಟಿ ರೂ.:
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಬಾಕಿ ಉಳಿದಿರುವ ಬಂಟ್ವಾಳ ತಾಲೂಕಿನ 9 ಗ್ರಾಮಗಳಿಗೆ ಬಹುಗ್ರಾಮ ಕುಡಯುವ ನೀರು ಒದಗಿಸಲು ಯೋಜನೆಗೆ 45.5 ಕೋಟಿ ರೂ. ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸಲಾಗುವುದು ಎಂದ ಅವರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಬಹುಗ್ರಾಮ ಕುಡಿತಯುಬವ ನೀರಿನ ಯೋಜನೆಯನ್ನು ವಿಸ್ತರಿಸಲು, ಶೀಘ್ರವೇ ಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸುವಂತೆ ಅವರು ಸೂಚನೆ ನೀಡಿದರು. ತಾಲೂಕಿನಲ್ಲಿ ಮಳೆ ಹಾನಿಗಯಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಶಾಸಕರ ಬೇಡಿಕೆಯಂತೆ 4 ಕೋಟಿ  ರೂ.ಬಿಡುಗಡೆಮಾಡಲಾಗಿದೆ ಎಂದರು.

ಬಂಟ್ವಾಳ ಶಾಸಕ  ರಾಜೇಶ್ ನಾಯ್ಕ್  ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ವಾಳ ತಾಲೂಕಿಗೆ ಬಹುಗ್ರಾಮ ಯೋಜನೆಯನ್ನು ವಿಸ್ತರಿಸಲು ಹೆಚ್ಚುವರಿ ಅನುದಾನ ಒದಗಿಸುವಂತೆ ಸಚಿವರರು ಒತ್ತಾಯಿಸಿದ ಅವರು, ಬಂಟ್ವಾಳ ವಿಧಾನ ಕ್ಷೇತ್ರಕ್ಕೆ ಸರಕರಾದ ಹೆಚ್ಚಿ ಪ್ರಾದ್ಯಾನ್ಯತೆ ಸಿಕ್ಕಿದೆ. ಜನಪ್ರತಿನಿಧಿಗಳ ಜೊಜೊತೆಯಾಗಿ ಕೆಲ ಮಾಡಿದಾಗ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿಯಿದ್ದು, ಅವುಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ತುಂಡುಗುತ್ತಿಗೆಯನ್ನು 5 ಲಕ್ಷ ರೂ.ಗೆ ವಿಸ್ತರಿಸಲಬೇಕು, ಸಿಬ್ಬಂದಿಗಳ ವೇತನ ವೇತನ ಪರಿಷ್ಕರಣೆ, ಜನಪ್ರತಿನಿಧಿಗಳ ಗೌರವ ಧನ ಉಪ್ಪಟ್ಟುಗೊಳಿಸಬೇಕು. ಅಂತರ್ಜಾಲ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಕ್ರಕೈಗೊಳ್ಳಬೇಕು ಎಂದ ಅವರು, ಗ್ರಾಮ ಪಂಚಾಯತ್‍ಗಳನ್ನು ಕೇರಳ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಜೊತೆಗೆ ಬಾಪೂಜಿ ಸೇವಾ ಕೇಂದ್ರವನ್ನು ಪುನರಸ್ಥಾಪಿಸಬೇಕೆಂದು ಕೋಟ ಒತ್ತಾಯಿಸಿದರು.  

ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಕೃಷಿ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಯು.ಪಿ. ಇಬ್ರಾಹಿಂ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪುತ್ತೂರು ತಾಪಂ ಅಧ್ಯಕ್ಷ. ರಾಧಾಕೃಷ್ಣ ಬೋರ್ಕರ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ, ಸಚಿವರ ವಿಶೇಷ ಅಧಿಕಾರಿ ಜಯರಾಮ, ತಹಶೀಲ್ದಾರ್ ರಶ್ಮೀ ಎಸ್.ಆರ್. ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವೇದಿಕೆಯಲ್ಲಿದ್ದರು.

ಗಾಂಧಿ ಪ್ರಶಸ್ತಿ ಪುರಸ್ಕøತ ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಸ್‍ಚಂದ್ರ ಶೆಟ್ಟಿ ಹಾಗೂ ವಿಟ್ಲಪಡ್ನೂರು ಗ್ರಾಪಂ ಅಧ್ಯಕ್ಷ ರವೀಶ್ ಶೆಟ್ಟಿ ಗಾಂಧಿ ಪುರಸ್ಕಾರ ಯಶೋಗಾಧೆಯನ್ನು ಮಂಡಿಸಿದರು. ಯೋಜನಾ ನಿರ್ದೇಶಕ ಮಧುಕುಮಾರ್ ಸ್ವಾಗತಿಸಿದರು. ತಾಪಂ ಇಒ ರಾಜಣ್ಣ ವಂದಿಸಿ, ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಖಾತೆ ಬದಲಾಣೆಯಾದರೆ ಚೆನ್ನಾಗಿತ್ತು: ಈಶ್ವರಪ್ಪ

ಪಂಚಾಯತ್‍ರಾಜ್ ವ್ಯವಸ್ಥೆಯ ಬಗ್ಗೆ ಸಮಗ್ರ ಜ್ಞಾನವನ್ನು ಹೊಂದಿರುವ ಕೋಟ್ ಶ್ರೀನಿವಾಸ ಪೂಜಾರಿಯವರಿಗೆ ಪಂಚಾಯ್‍ರಾಜ್ ಇಲಾಖೆ ಹಾಗೂ ದೇವರ ಬಗ್ಗೆ ಹೆಚ್ಚಿನ ಒಲವು ಇರುವ ನನಗೆ ಮುಜರಾಯಿ ಖಾತೆ ನೀಡಿದರೆ  ಚೆನ್ನಾಗಿತ್ತು ಎಂದು ಸಚಿವ ಈಶ್ವರಪ್ಪ ಹೇಳಿದರು.

ಶಾಸಕರಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಇರುವ ಜ್ಞಾನ ಅದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಲ್ಲ. ಪಂಚಾಯತ್ ರಾಜ್ ಅಭಿವೃದ್ಧಿಗೆ ನಿಮ್ಮ ಸಲಹೆ ಅಗತ್ಯವಿದ್ದು, ಮುಜರಾಯಿ ಇಲಾಖೆಯಲ್ಲಿನ ವ್ಯವಸ್ಥೆ ಸುಧಾರಣೆಗೆ ನನ್ನ ಸಲಹೆಯನ್ನು ಸ್ವೀಕರಿಸಬೇಕು ಎಂದು ಹಾಸ್ಯಭರಿತವಾಗಿ ಸಲಹೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News