ಎಚ್-1ಬಿ ಉದ್ಯೋಗ ವೀಸಾ ಅರ್ಜಿ ಶುಲ್ಕ 10 ಡಾಲರ್ ಏರಿಕೆ

Update: 2019-11-08 17:55 GMT

ವಾಶಿಂಗ್ಟನ್, ನ. 8: ಅಮೆರಿಕವು ತನ್ನ ಎಚ್-1ಬಿ ಉದ್ಯೋಗ ವೀಸಾ ಅರ್ಜಿಗಳ ಪರಿಷ್ಕೃತ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಅರ್ಜಿ ಶುಲ್ಕವನ್ನು 10 ಡಾಲರ್ (713 ರೂಪಾಯಿ)ನಷ್ಟು ಹೆಚ್ಚಿಸಿದೆ.

ಹಿಂದಿರುಗಿಸಲಾಗದ ಈ ಶುಲ್ಕವು, ಎಚ್-1ಬಿ ಆಯ್ಕೆ ಪ್ರಕ್ರಿಯೆಯನ್ನು ಅರ್ಜಿದಾರರು ಮತ್ತು ಯುಎಸ್‌ಸಿಐಎಸ್ ಎರಡಕ್ಕೂ ಹೆಚ್ಚು ಉಪಯುಕ್ತವಾಗಿಸುವ ನಿಟ್ಟಿನಲ್ಲಿ, ನೂತನ ಇಲೆಕ್ಟ್ರಾನಿಕ್ ನೋಂದಣಿ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುವುದು ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್) ಗುರುವಾರ ಹೇಳಿದೆ.

‘‘ಹೆಚ್ಚು ದಕ್ಷ ಮತ್ತು ಪರಿಣಾಮಕಾರಿ ಎಚ್-1ಬಿ ಕ್ಯಾಪ್ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೊಳಿಸಲು ಈ ಕ್ರಮವು ಸಹಕಾರಿಯಾಗುತ್ತದೆ’’ ಎಂದು ಯುಎಸ್‌ಸಿಐಎಸ್‌ನ ಉಸ್ತುವಾರಿ ನಿರ್ದೇಶಕ ಕೆನ್ ಕಕ್ಸಿನೆಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News