ತೀರ್ಪಿನಿಂದ ನನ್ನ ನಿಲುವಿಗೆ ಬೆಂಬಲ: ಅಡ್ವಾಣಿ

Update: 2019-11-09 16:49 GMT

ಹೊಸದಿಲ್ಲಿ, ನ. 9: ರಾಮ ಮಂದಿರ ನಿರ್ಮಾಣವಾಗಬೇಕೆಂಬ ಕ್ಷೀಣ ಧ್ವನಿಗಳನ್ನು 1980ರ ದಶಕದಲ್ಲಿ ಬೃಹತ್ ಚಳವಳಿಯಾಗಿ ಪರಿವರ್ತಿಸಿದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಸುಪ್ರೀಮ್ ಕೋರ್ಟ್‌ನ ತೀರ್ಪನ್ನು ಶನಿವಾರ ಸ್ವಾಗತಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪು ನನ್ನ ನಿಲುವನ್ನು ಎತ್ತಿಹಿಡಿದಿದೆ ಎಂದು ಅವರು ಹೇಳಿದ್ದಾರೆ.

‘‘ನನ್ನ ನಿಲುವಿಗೆ ಬೆಂಬಲ ಸಿಕ್ಕಿದೆ. ತೀರ್ಪು ನನ್ನನ್ನು ಗಾಢವಾಗಿ ಹಾರೈಸಿದೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮನಿಗೆ ಭವ್ಯ ಮಂದಿರವೊಂದನ್ನು ನಿರ್ಮಿಸಲು ಸರ್ವಾನುಮತದ ತೀರ್ಪು ಹಾದಿ ಮಾಡಿಕೊಟ್ಟಿದೆ’’ ಎಂದು ಅಡ್ವಾಣಿ ನುಡಿದರು.

ವಿಶ್ವಹಿಂದೂ ಪರಿಷತ್ ಸ್ವಾಗತ

ಅಯೋಧ್ಯೆಯ ಜಮೀನು ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿಶ್ವಹಿಂದೂ ಪರಿಷತ್ ಶನಿವಾರ ಸ್ವಾಗತಿಸಿದೆ. ರಾಮ ಮಂದಿರಕ್ಕಾಗಿ 60 ಶೇಕಡ ಕಂಬಗಳು ಮತ್ತು ತೊಲೆಗಳ ನಿರ್ಮಾಣ ಈಗಾಗಲೇ ಆಗಿದೆ ಎಂದು ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ನ್ಯಾಯಾಲಯದ ಆದೇಶದಂತೆ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರವು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನ್ಯಾಯಾಲಯದ ತೀರ್ಪು ‘ಭವ್ಯ’ ರಾಮ ಮಂದಿರ ನಿರ್ಮಾಣದ ನಿಟ್ಟಿನಲ್ಲಿ ‘ನಿರ್ಣಾಯಕ ಹೆಜ್ಜೆಯಾಗಿದೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News