ಪಾವಂಜೆಯಲ್ಲಿ ದ.ಕ. ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನ
ಮಂಗಳೂರು, ನ.9: ದ.ಕ.ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನವು ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣದ ಪ್ರಾಂಗಣದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಶ್ರಿವಿದ್ಯಾ ವಿನಾಯಕ ಯುವಕ ಮಂಡಳದ ಸಹಯೋಗದೊಂದಿಗೆ ಡಿಸೆಂಬರ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.
ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಅವರ ಉಪಸ್ಥಿತಿಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ಥಳೀಯ ಪ್ರಮುಖರನ್ನು ಒಳಗೊಂಡ ಸ್ವಾಗತ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಿ, ವಿವಿಧ ಗೋಷ್ಠಿಗಳನ್ನು ಅಯೋಜಿಸಲು ತೀರ್ಮಾನಿಸಲಾಯಿತು.
ಶ್ರಿ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ರಾವ್ ಹಾಗೂ ನಕ್ರೆ ಬಾಲಕೃಷ್ಣ ರಾವ್, ಕಸಾಪ ಪದಾಧಿಕಾರಿಗಳಾದ ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ, ಪ್ರೊ. ಪಿ. ಕೃಷ್ಣಮೂರ್ತಿ ಹಾಗೂ ವಿದ್ಯಾನಾಯಕ ಯುವಕ ಮಂಡಳದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಸೂರ್ಯಕುಮಾರ್, ಕೋಶಾಧಿಕಾರಿ ಪರಮೇಶ್ವರ ಎ., ವಿದ್ಯಾಶಂಕರ ಭಟ್, ಜೀವನ್ ಪ್ರಕಾಶ್, ರಮೇಶ್ ಕೋಟ್ಯಾನ್, ವಿನೋದ್ ಕೊಳುವೈಲು, ಹಿಮಕರ ಕದಿಕೆ ಉಪಸ್ಥಿತರಿದ್ದರು.
ಯುವಕ ಮಂಡಳದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿ ರಾಮದಾಸ ಪಾವಂಜೆ ಸ್ವಾಗತಿಸಿದರು. ಯುವಕ ಮಂಡಳದ ಅಧ್ಯಕ್ಷ ಸುಧಾಕರ ಆರ್. ಅಮೀನ್ ವಂದಿಸಿದರು.