×
Ad

1.50 ಕೋಟಿ ರೂ. ವೆಚ್ಚದ ವರಟಿಲ್-ಮುಲಾರಪಟ್ನ ಕಾಂಕ್ರಿಟ್ ರಸ್ತೆ ಉದ್ಘಾಟನೆ

Update: 2019-11-09 22:28 IST

ಬಂಟ್ವಾಳ : ಶಾಸಕರ 1.50 ಕೋಟಿ ರೂ. ವೆಚ್ಚದ ಅನುದಾನಲ್ಲಿ ನಿರ್ಮಾಣವಾದ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ವರಟಿಲ್-ಮುಲಾರಪಟ್ನ ಕಾಂಕ್ರಿಟ್ ರಸ್ತೆಯನ್ನು ಶನಿವಾರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಪೊಳಲಿ ಮೂಡಬಿದಿರೆ ಸಂಪರ್ಕದ ಈ ರಸ್ತೆಗೆ ಕಾಂಕ್ರಿಟ್ ಮಾಡುವ ಬಗ್ಗೆ ಈ ಭಾಗದ ನಿವಾಸಿಗಳಿಂದ ಬೇಡಿಕೆಯಾಗಿತ್ತು. ಮುಂದಿನ ದಿನಗಳಲ್ಲಿ ಈ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಬೇಡಿಕೆಗೆ ಅನುಗುಣವಾಗಿ ಹಂತಹಂತವಾಗಿ ಕೆಲಸ ಮಾಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಯಶವಂತ ಪೊಳಲಿ, ಬಂಟ್ವಾಳ ಕ್ಷೇತ್ರ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಮೋರ್ಚಾದ ಕಾರ್ಯದರ್ಶಿ ನಂದರಾಮ ರೈ, ಅರಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ ಅಳ್ವ, ಪಂಚಾಯತ್ ಸದಸ್ಯ ರದಾ ಎಂ.ಬಿ. ಆಶ್ರಫ್, ಹಾಜಬ್ಬ, ಪ್ರಮುಖರಾದ ಪ್ರಕಾಶ್ ಆಳ್ವ, ರತ್ನಾಕರ ಕೋಟ್ಯಾನ್, ಹರಿಯಪ್ಪ ಮುತ್ತೂರು, ರಮಾನಾಥ ರಾಯಿ, ಗಣೇಶ್ ರೈ, ರಂಜನ್ ಕುಮಾರ್, ಸುಂದರ ಶೆಟ್ಟಿ, ರಮೇಶ್ ಭಟ್ಟಾಜೆ, ಪುರುಷೋತ್ತಮ ಶೆಟ್ಟಿ ವಾಮದಪದವು,  ಎಂ.ಅಬ್ದುಲ್ ಹಮೀದ್, ಮಸೀದಿ ಅಧ್ಯಕ್ಷ ಅಶ್ರಫ್, ಜಿ.ಎಚ್.ಎಂ, ಎಂ.ಎಸ್.ಶಾಲಿ, ಕಾರ್ಯದರ್ಶಿ ಸಜೀಯುದ್ದೀನ್,  ಪುತ್ತುಮೋನು ಮಾರ್ಗದಂಗಡಿ, ಎ.ಪಿ.ನಾಶೀರ್, ಎಂ.ಪಿ. ಲತೀಫ್, ಇಬ್ರಾಹಿಂ, ಜಬ್ಬಾರ್, ಗುತ್ತಿಗೆದಾರ ಶಾಫಿ ಪಟ್ನ, ಕೆಆರ್ ಡಿಎಲ್‍ನ ಇಂಜಿನಿಯರ್ ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News