ಪುತ್ತೂರು : ಮೀಲಾದುನ್ನಬಿ ಪ್ರಯುಕ್ತ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Update: 2019-11-09 17:13 GMT

ಪುತ್ತೂರು : ಮುಸ್ಲಿಂ ಯುವಜನ ಪರಿಷತ್ ಸಂಘಟನೆ  ಮತ್ತು ಪುತ್ತೂರು ತಾಲೂಕು ಈದ್ ಮಿಲಾದ್ ಸಮಿತಿಯ ವತಿಯಿಂದ ನ.10ರಂದು ಪುತ್ತೂರಿನಲ್ಲಿ  ನಡೆಯಲಿರುವ 26ನೇ ವರ್ಷದ ಬೃಹತ್ ಮಿಲಾದ್ ಸಮಾವೇಶದ ಪ್ರಯುಕ್ತ ಶನಿವಾರ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. 

ಪುತ್ತೂರಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಅವರ ನೇತೃತ್ವದಲ್ಲಿ, ಆಸ್ಪತ್ರೆಯ ವೈದ್ಯೆ ಡಾ. ಶಾರದಮ್ಮ ಅವರ ಉಪಸ್ಥಿತಿಯಲ್ಲಿ ಸಂಘಟನೆಯ ಕಾರ್ಯಕರ್ತರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.  

ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಶಾಕೀರ್ ಹಾಜಿ ಮಿತ್ತೂರು, ಉಸ್ಮಾನ್ ಹಾಜಿ ಚೆನ್ನಾರ್, ಮುಸ್ಲಿಂ ಯುವಜನ ಪರಿಷತ್ ರಾಜ್ಯ ಸಂಚಾಲಕ ಎಂ.ಪಿ.ಅಬೂಬಕ್ಕರ್, ಜಿಲ್ಲಾ ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್, ತಾಲೂಕು ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ, ಸಂಘಟನಾ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಕಾನೂನು ಸಲಹೆಗಾರ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಈದ್ ಮಿಲಾದ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಅಶ್ರಫ್ ಮುಕ್ವೆ, ಕೋಶಾಧಿಕಾರಿ ಅಶ್ರಫ್ ಬಾವಾ ಪಡೀಲ್, ಸಂಚಾಲಕ ಖಾಸಿಂ ಹಾಜಿ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News