ಲೆಬನಾನ್: ಗಂಭೀರ ಆರೋಗ್ಯ ವಿಪತ್ತಿನ ಎಚ್ಚರಿಕೆ

Update: 2019-11-09 17:42 GMT

ಬೈರೂತ್, ನ.9: ಲೆಬನಾನ್‌ನಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ವಿಷಮಿಸಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಗಂಭೀರ ಪ್ರಮಾಣದ ಆರೋಗ್ಯ ವಿಪತ್ತು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

 ತೀವ್ರ ಆರ್ಥಿಕ ಸಂಕಷ್ಟ ಹಾಗೂ ಅಗತ್ಯದ ಔಷಧಗಳ ಕೊರತೆಯ ಕಾರಣ ಆಸ್ಪತ್ರೆಗಳು ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸುತ್ತಿವೆ. ಈಗ ಇರುವ ಔಷಧದ ದಾಸ್ತಾನು ಒಂದು ತಿಂಗಳಿಗಷ್ಟೇ ಸಾಕಾಗುತ್ತದೆ. ಪರಿಸ್ಥಿತಿಯನ್ನು ತಕ್ಷಣ ಸುಧಾರಿಸದಿದ್ದರೆ ದೇಶದಲ್ಲಿ ಗಂಭೀರ ಆರೋಗ್ಯ ವಿಪತ್ತು ಸಂಭವಿಸಬಹುದು ಎಂದು ಎಚ್ಚರಿಸಲಾಗಿದೆ.

ಈ ಮಧ್ಯೆ, ರಾಜಕೀಯ ಭ್ರಷ್ಟಾಚಾರ ಮತ್ತು ಹೊಸ ತೆರಿಗೆ ವಿಧಿಸುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ 23ನೇ ದಿನವೂ ಮುಂದುವರಿದಿದ್ದು, ಲೆಬನಾನ್‌ನಲ್ಲಿ ಮಧ್ಯಂತರ ಸರಕಾರ ರಚನೆಯ ಪ್ರಕ್ರಿಯೆಗೆ ಇನ್ನೂ ಚಾಲನೆ ದೊರಕಿಲ್ಲ. ಇದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News