×
Ad

ಸಜೀಪನಡು: ಸಂಭ್ರಮದ ಮೀಲಾದುನ್ನಬಿ ಆಚರಣೆ; ಕಾಲ್ನಡಿಗೆ ಜಾಥಾ, ದಫ್ ಪ್ರದರ್ಶನ

Update: 2019-11-10 18:39 IST

ಬಂಟ್ವಾಳ, ನ.10: ಪ್ರವಾದಿ ಮುಹಮ್ಮದ್ (ಸ.ಅ)ರ ಜನ್ಮ ದಿನದ ಪ್ರಯುಕ್ತ ಮೀಲಾದುನ್ನಬಿಯನ್ನು ತಾಲೂಕಿನ ಸಜೀಪನಡು ಗ್ರಾಮದಲ್ಲಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ.ಅಬ್ದುಲ್ ರಝಾಕ್ ರವರ ನೇತೃತ್ವದಲ್ಲಿ ಆಚರಿಸಲಾಯಿತು.

ಸಮಾರಂಭದಲ್ಲಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಸಮಿತಿಯ ಅಧ್ಯಕ್ಷ ಹಾಜಿ.ಎಸ್ ಅಬ್ಬಾಸ್ ಸಜೀಪ, ಮಂಗಳೂರಿನ ಬದ್ರಿಯಾ ಜುಮಾ ಮಸೀದಿಯ ಖತೀಬ್ ಶೇಖಬ್ಬ ಮುಸ್ಲಿಯಾರ್, ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಎಸ್.ಮೊಹಮ್ಮದಾಲಿ, ಕೇಂದ್ರ ಜಮಾಅತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಮುಹಮ್ಮದ್, ಉಪಾಧ್ಯಕ್ಷ ಆಸಿಫ್ ಕುನ್ನಿಲ್ ಹಾಗೂ ಇನ್ನಿತರ ಉಲಮಾ ಹಾಗೂ ಉಮರಾಗಳು ಪಾಲ್ಗೊಂಡಿದ್ದರು.

ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಬೂಸ್ವಾಲಿಹ್ ಫೈಝಿ ಅವರ ಪಾರ್ಥನೆ ಮೂಲಕ ಮೀಲಾದ್ ರ‍್ಯಾಲಿಗೆ ಚಾಲನೆ ನೀಡಲಾಯಿತು. ಮೀಲಾದ್ ರ‍್ಯಾಲಿಯು ಕೇಂದ್ರ ಜುಮಾ ಮಸೀದಿಯಿಂದ ಸಜಿಪ ಜಂಕ್ಷನ್ ವರೆಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News