×
Ad

ಮಂಗಳೂರು ಮನಪಾ ಚುನಾವಣೆ : ನ್ಯಾಯಕ್ಕಾಗಿ ಧ್ವನಿ ಎತ್ತಲು ಎಸ್.ಡಿ.ಪಿ.ಐಗೆ ಮತ ನೀಡಲು ಕರೆ

Update: 2019-11-10 19:43 IST

ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಕೇವಲ ಆರು ವಾರ್ಡ್ ಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದು, ನ್ಯಾಯಕ್ಕಾಗಿ ಧ್ವನಿ ಎತ್ತಲು ಎಸ್.ಡಿ.ಪಿ.ಐಗೆ ಮತ ನೀಡಿ ಎಂದು ಪಕ್ಷದ ಮಂಗಳೂರು ಉತ್ತರ ಮತ್ತು ದಕ್ಷಿಣ ಅಸೆಂಬ್ಲಿ ಮುಖಂಡರಾದ ಸುಹೈಲ್ ಖಾನ್, ಅಝರ್ ಚೊಕ್ಕಬೆಟ್ಟು ತಿಳಿಸಿದ್ದಾರೆ.

ಬೆಂಗರೆ, ಕುದ್ರೋಳಿ, ಬಜಾಲ್, ಪಂಜಿಮೊಗರು ಮತ್ತು ಕಣ್ಣೂರು ವಾರ್ಡುಗಳಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಪೊರೇಟರ್ ಗಳು ಗೆದ್ದು ಅಭಿವೃದ್ಧಿ ಮಾಡಿಲ್ಲ. ಈ ಪಕ್ಷಗಳು ತಾರತಮ್ಯ ನೀತಿ ಅನುಸರಿಸುತ್ತಿವೆ. ಈ ಬಾರಿ ಎಸ್ ಡಿ ಪಿ ಐ ಸ್ಪರ್ಧಿಸಿದ ಎಲ್ಲಾ ಆರು ವಾರ್ಡುಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಮಾದರಿ ವಾರ್ಡುಗಳಾಗಿ ಬದಲಿಸಲಿದ್ದಾರೆ. ನೀರು, ರಸ್ತೆ, ಬೀದಿ ದೀಪ, ಚರಂಡಿ ಮತ್ತಿತರ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

2018ರ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಉಳ್ಳಾಲ, ಬಂಟ್ವಾಳ ಮತ್ತು ಪುತ್ತೂರಿನಲ್ಲಿ 11 ವಾರ್ಡ್‌ ಗಳಲ್ಲಿ ಎಸ್.ಡಿ.ಪಿ.ಐ ಗೆಲುವು ಸಾಧಿಸಿದೆ. ಈ ಫಲಿತಾಂಶ ನ. 12 ರಂದು ನಡೆಯುವ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಪುನರಾವರ್ತನೆ ಗೊಲ್ಲಲಿದೆ. ಮತದಾರರು ಪರ್ಯಾಯ ರಾಜಕೀಯ ಪಕ್ಷ ಮತ್ತು ಉತ್ತಮ ಜನ ನಾಯಕರ ಹುಡುಕಾಟದಲ್ಲಿದ್ದಾರೆ. ಈ  ಬೇಡಿಕೆಯಂತೆ ಎಸ್.ಡಿ.ಪಿ.ಐ ಸಮಾಜ ಸೇವೆ ಹಿನ್ನೆಲೆಯ 6 ಅಭ್ಯರ್ಥಿಗಳನ್ನು ಕಣಕ್ಕಿಲಿಸಿದೆ. ಗ್ಯಾಸ್ ಸಿಲಿಂಡರ್ ಚಿಹ್ನೆಗೆ ಮತದಾರರು ಖಂಡಿತ ಮತ ನೀಡಲಿದ್ದಾರೆ ಎಂದರು.

ಸ್ವಚ್ಛ, ಸುಂದರ, ಸೌಹಾರ್ದ ಮಂಗಳೂರಿಗಾಗಿ ಈ ಬಾರಿ ಎಸ್.ಡಿ.ಪಿ.ಐ ಎಂಬ ಘೋಷಣೆ ಯೊಂದಿಗೆ ಮತಯಾಚನೆ ನಡೆಸಿದೆ. ರಾಜಕೀಯ ಶುದ್ಧೀಕರಣ, ಸಾಮಾಜಿಕ ನ್ಯಾಯ, ಕೋಮು ಸೌಹಾರ್ದ, ಭ್ರಷ್ಟಾಚಾರ ರಹಿತ ವ್ಯವಸ್ಥೆ ಮತ್ತು ತಾರತಮ್ಯ ವಿರುದ್ಧ ಎಸ್.ಡಿ.ಪಿ.ಐ ಪಕ್ಷ ನಿರಂತರ ಬೀದಿ ಹೋರಾಟ ನಡೆಸುತ್ತಿದೆ. 6 ಕಾರ್ಪೊರೇಟರ್ ಗಳು ಜಯಗೊಂಡರೆ ಖಂಡಿತವಾಗಿಯೂ ಈ 6 ವಾರ್ಡ್‌ ಗಳನ್ನು ಮಂಗಳೂರಿನಲ್ಲಿಯೇ ಮಾದರಿ ವಾರ್ಡ್‌ಗಳಾಗಿ ಪರಿವರ್ತಿಸಲಿದ್ದಾರೆ. ಕಳೆದ ಬಾರಿ ಕಾಟಿಪಳ್ಳ 5ನೇ ವಾರ್ಡ್ ನಲ್ಲಿ ಗೆದ್ದು ಪಕ್ಷದ ಕಾರ್ಯಕರ್ತರು ನಾಯಕರು ಸೇರಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿ ಅಲ್ಲಿ ಮತ್ತೆ ಎರಡನೇ ಬಾರಿಗೆ ಎಸ್.ಡಿ.ಪಿ.ಐ ಗೆಲುವು ಖಚಿತವಾಗಿದೆ. ಜನರ ಹಕ್ಕುಗಳಿಗಾಗಿ, ನ್ಯಾಯಕ್ಕಾಗಿ ಮಹಾನಗರ ಪಾಲಿಕೆಯ ಒಳಗೆ ಮತ್ತು ವಾರ್ಡ್ ಗಳಲ್ಲಿ ನಮ್ಮ ಕಾರ್ಪೊರೇಟರ್ ಗಳು ಸೇವೆ ಸಲ್ಲಿಸಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News