ಮಂಗಳೂರು: ನ. 24ರಂದು ‘ಫೋರಮ್ ಕಲರಮ-ಚಿತ್ರಕಲಾ ಸ್ಪರ್ಧೆ’
ಮಂಗಳೂರು, ನ.10: ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಗರದ ಪಾಂಡೇಶ್ವರದಲ್ಲಿನ ಫೋರಮ್ ಫಿಝ್ಝಾ ಮಾಲ್‌ನಲ್ಲಿ ನ. 24ರಂದು ಮಕ್ಕಳಿಗಾಗಿ ‘ಫೋರಮ್ ಕಲರಮ-ಚಿತ್ರಕಲಾ ಸ್ಪರ್ಧೆ’ಯನ್ನು ಏರ್ಪಡಿಸಲಾಗಿದೆ.
ಭವಿಷ್ಯದಲ್ಲಿ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆ (what does a greener planet mean to your future ?) ಎಂಬ ವಿಷಯದಲ್ಲಿ ಮಕ್ಕಳು ತಮ್ಮ ಕಲಾತ್ಮಕ ಕಲ್ಪನೆಯನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಕಲೆ ಮತ್ತು ಸುಸ್ಥಿರತೆ ನಿಕಟ ಸಂಬಂಧ ಹೊಂದಿವೆ. ವಿಭಿನ್ನ ಬಣ್ಣಗಳ ಮೋಡಿಯಿಂದ ತಮ್ಮ ಭಾವನೆಗಳನ್ನು ಚಿತ್ರಕಲೆಯ ಮೂಲಕ ಅರಳಿಸಬಹುದು.
ಚಿತ್ರಕಲಾ ಸ್ಪರ್ಧೆಯಲ್ಲಿ 4ರಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ವಿಜಯಶಾಲಿಗಳು 72 ಸಾವಿರ ರೂ. ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ https://www.forummalls.in/forum-colorama-2019/ ವೆಬ್‌ಸೈಟ್ ಗೆ ಭೇಟಿ ನೀಡಬಹುದು ಅಥವಾ 0824-2498498ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.