ಕೊಲ್ಲರಕೋಡಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ

Update: 2019-11-10 14:38 GMT

ಕೊಲ್ಲರಕೋಡಿ, ನ.10: ಪ್ರವಾದಿ ಮುಹಮ್ಮದ್ (ಸ.) ಅವರ ಜನ್ಮ ದಿನವನ್ನು ನೂರುಲ್ ಹುದಾ ಮಸ್ಜಿದ್ ತಕ್ವಾ, ನೂರುಲ್ ಉಲೂಂ ಮದರಸ ಕೊಲ್ಲರಕೋಡಿ ಇದರ ವತಿಯಿಂದ ರವಿವಾರ ಸಂಭ್ರಮದಿಂದ ಆಚರಿಸಲಾಯಿತು.

ಕೊಲ್ಲರಕೋಡಿ ಮಸೀದಿಯಿಂದ ಮಂಜನಾಡಿ ಕೇಂದ್ರ ಜುಮಾ ಮಸೀದಿವರೆಗೆ ಮಿಲಾದ್ ರ್ಯಾಲಿ ನಡೆಯಿತು.

ಈ ಸಂದರ್ಭ ನೂರುಲ್ ಹುದಾ ಮಸ್ಜಿದ್ ತಕ್ವಾ ಅಧ್ಯಕ್ಷ ಇಬ್ರಾಹಿಂ ಕುಂಞಿ ಹಾಜಿ ಪಾರೆ, ಕೊಲ್ಲರಕೋಡಿ ಎಸ್ಸೆಸ್ಸೆಫ್ ಘಟಕಾಧ್ಯಕ್ಷ ಆಸಿಫ್, ಅನೀಸ್ ಬಳಪು, ಖಾದರ್ ಚೌಕ, ಲತೀಫ್, ಹಮೀದ್ ತಟ್ಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News