ತಲಪಾಡಿ ಸುನ್ನೀ ಸಂಘಟನೆಗಳಿಂದ ಮಿಲಾದ್ ಜಾಥಾ

Update: 2019-11-10 15:27 GMT

ಮಂಗಳೂರು, ನ:10 ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ಎಸ್‌ಜೆಯು, ಎಸ್‌ಜೆಎಂ, ಎಸ್‌ಎಂಎ, ಎಸ್‌ವೈಎಸ್, ಎಸ್ಸೆಸ್ಸೆಫ್ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ರವರ ಜನ್ಮದಿನದ ಅಂಗವಾಗಿ ಮಿಲಾದ್ ಜಾಥಾ ರವಿವಾರ ಜರುಗಿತು.

ಅಸೈಯ್ಯದ್ ಅರಬಿ ವಲಿಯುಲ್ಲಾಹಿ (ಖ.ಸಿ.) ಉಚ್ಚಿಲ ದರ್ಗಾ ಝಿಯಾರತ್‌ನೊಂದಿಗೆ ಆರಂಭಗೊಂಡು ತಲಪಾಡಿ ಬಾಪಂಕುಂಞಿ (ಖ.ಸಿ.) ವಲಿಯವರ ಝಿಯಾರತ್‌ನೊಂದಿಗೆ ಸಮಾಪ್ತಿಗೊಂಡ ಕಾರ್ಯಕ್ರಮದಲ್ಲಿ ಅಲ್ಹಾಜ್ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಡಾ. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಸಖಾಫಿ ತಲಪಾಡಿ, ಹಾಜಿ ಎನ್‌ಎಸ್ ಉಮರ್ ಮಾಸ್ಟರ್, ಯುಬಿಎಂ ಮುಹಮ್ಮದ್ ಹಾಜಿ, ಪೆರಿಬೈಲ್ ಅಬ್ಬಾಸ್ ಹಾಜಿ, ಬಿ.ಎಚ್ ಇಸ್ಮಾಯೀಲ್, ಪಿ.ಎಂ. ಮುಹಮ್ಮದ್, ಕೆ.ಎಂ. ಫಾರೂಕ್ ಬಟ್ಟಪ್ಪಾಡಿ ಸಹಿತ ಹಲವು ಸುನ್ನಿ ಸಂಘ ಕುಟುಂಬದ ನೇತಾರರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News