ಭಟ್ಕಳ: ಸಂಭ್ರಮದ ಮಿಲಾದ್ ಮೆರವಣೆಗೆ

Update: 2019-11-10 17:01 GMT

ಭಟ್ಕಳ: ಹಝರತ್ ಮುಹಮ್ಮದ್ ಪೈಗಂಬರರ ಜನ್ಮಾದಿನಾಚಣೆಯ ಅಂಗವಾಗಿ ಬಝ್ಮೆ ಫೈಝೆ ರಸೂಲ್, ಇದಾರೆ ಫೈಝೆ ರಸೂಲ್ ಹಾಗೂ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ನೇತೃತ್ವದಲ್ಲಿ ರವಿವಾರ ಬೃಹತ್ ಮಿಲಾದ್ ಮೆರವಣೆಗೆ ನರವೇರಿತು.

ಸಂಜೆ 4:30ಕ್ಕೆ ಈದ್ಗಾ ಮೈದಾನದಿಂದ ಆರಂಭಗೊಂಡ ಮಿಲಾದ್ ಮೆರವಣೆಗೆ ಶಮ್ಸುದ್ದೀನ್ ವೃತ್ತದ ಮೂಲಕ ಮುಖ್ಯ ರಸ್ತೆ, ಸುಲ್ತಾನ್ ಸ್ಟ್ರೀಟ್ ಚೌಕ್ ಬಝಾರ್, ಮುಹಮ್ಮದ್ ಅಲಿ ರೋಡ್, ಮಾರಿಕಟ್ಟೆ ಮಾರ್ಗವಾಗಿ   ಸಾರ್ವಜನಿಕ ಮೈದಾನದಲ್ಲಿ ಸಮಾಪ್ತಿಗೊಂಡಿತು.

ಬಝ್ಮೆ ಫೈಝೆ ರಸೂಲ್ ಸಂಘಟನೆಯ ಮುಖಂಡರಾದ ಅಬ್ದುಲ್ ಅಲೀಮ್ ಗವಾಯಿ, ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಮುಖಂಡರಾದ ಮುನೀರ್ ಶೇಖ್, ಫೈಝಾನ್ ರಝಾ, ಅಬುಹುರೈರಾ ಅಕ್ರಮಿ, ಜಿಫ್ರಿ ಅಕ್ರಮಿ, ಮೌಲಾನ ಅಷದ್ ಸಿದ್ದೀಖಾ, ರಿಝ್ವಾನ್ ಸಿದ್ದೀಖಾ ಸೇರಿದಂತೆ ಹಲವು ಗಣ್ಯರು ಮೆರವಣೆಗೆ ನೇತೃತ್ವ ವಹಿಸಿದ್ದರು.

ಮೆರವಣೆಗೆಯಲ್ಲಿ ವಿದ್ಯಾರ್ಥಿಗಳ ಧಫ್ ಕುಣಿತ, ಹಾಗೂ ಆಕರ್ಷಕ ಟ್ಯಾಬ್ಲೊಗಳು ಜನರ ಗಮನ ಸೆಳೆದವು. ಅಡಿಷನಲ್ ಎಸ್.ಪಿ ಗೋಪಾಲ್ ಬೈಕೋಡ್, ಭಟ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ನಿಖಿಲ್ ಬಿ, ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News