×
Ad

ಬೆಳ್ತಂಗಡಿ: ಪ್ರವಾದಿ ಜನ್ಮದಿನಾಚರಣೆ

Update: 2019-11-10 22:48 IST

ಬೆಳ್ತಂಗಡಿ: ತಾಲೂಕಿನಾಧ್ಯಂತ ಪ್ರವಾದಿ ಜನ್ಮದಿನಾಚರಣೆಯನ್ನು ಸಮಭ್ರಮದಿಂದ ಆಚರಿಸಲಾಯಿತು. ಉಜಿರೆ, ಗುರುವಾಯನಕೆರೆ, ಕಕ್ಕಿಂಜೆ, ಕಾಜೂರು, ವೇಣೂರು, ಗೇರುಕಟ್ಟೆ, ಮಡಂತ್ಯಾರು ಸೇರಿದಂತೆ ಎಲ್ಲಡೆ ಮಸೀದಿಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಿತು, ಮಿಲಾದ್ ರ್ಯಾಲಿಯನ್ನೂ ಆಯೋಜಿಸಲಾಗಿತ್ತು.

ಮುಂಡಾಜೆ: ಮಸ್ಲಕ್ ತ್ತ ಅಲೀಮಿ ಸ್ಸುನ್ನಿಯ್ಯ ಮುಂಡಾಜೆ,  ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಮುಂಡಾಜೆ ಇದರ ವತಿಯಿಂದ ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್, ಎಂಡಿಸಿ, ಇದರ ನೇತೃತ್ವದಲ್ಲಿ ಪ್ರವಾದಿ ಜನ್ಮ ದಿನಾಚರಣೆ ಪ್ರಯುಕ್ತ ಮಿಲಾದ್ ಎವೆನ್ಯೂ ಮಾರ್ಚ್, ಹುಬ್ಬುರ್ರಸೂಲ್ ಕಾನ್ಫರೆನ್ಸ್, ಮದರಸ ವಿದ್ಯಾರ್ಥಿಗಳ ಟೇಲೆಂಟ್ ಎಕ್ಸ್ ಪೋ, ಸ್ಥಾಪಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಜಮಲುಲ್ಲೈಲಿ ಇಸ್ಲಾಮಿಕ್ ಕ್ಯಾಂಪಸ್ ನಲ್ಲಿ ನಡೆಯಿತು.

ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ವಹಿಸಿದ್ದರು. ಬೆಳಗ್ಗಿನ ಜಾವ ನಡೆದ ಮೌಲೀದ್ ಪಾರಾಯಣ ವನ್ನು ಖತೀಬ್ ಇಬ್ರಾಹಿಂ ಸಖಾಫಿ, ಸಿದ್ದೀಕ್ ಸಖಾಫಿ ಹಿಮಮಿ ನಡೆಸಿಕೊಟ್ಟರು.

ಮಸ್ಲಕ್  ಕಾರ್ಯಾಧ್ಯಕ್ಷ  ಹಾಜಬ್ಬ, ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ, ಸದಸ್ಯ ಇಬ್ರಾಹಿಂ ದರ್ಖಾಸು, ಜಮಲುಲ್ಲೈಲಿ ಸುನ್ನೀ ಜುಮಾ ಮಸ್ಜಿದ್  ಅಧ್ಯಕ್ಷ  ಅಬ್ದುಲ್ ಹಮೀದ್ ನೆಕ್ಕರೆ, ಕಾರ್ಯದರ್ಶಿ ಲೆತೀಫ್, ಕೋಶಾಧಿಕಾರಿ ಮುಹಮ್ಮದ್ ಜೈ ಭಾರತ್, ಎಂಡಿಸಿ ಸ್ಥಾಪಕಾಧ್ಯಕ್ಷ  ಸಯ್ಯಿದಲಿ ಹಾಜಿ, ಧ್ವಜಾರೋಹಣ ಗೈದರು. 

ಸಮಾರಂಭದಲ್ಲಿ ಮುಜೀಬ್ ಸಾಹೇಬ್ ನಿಡಿಗಲ್, ಬಿ.ಎನ್ ಹಮೀದ್, ಎನ್.ಎಮ್ ರಫೀಕ್, ಹನೀಫ್ ಮುಸ್ಲಿಯಾರ್, ಅಝೀಝ್ ನಿಡಿಗಲ್, ಶರೀಫ್ ಬೆರ್ಕಳ, ರಶೀದ್ ಬಲಿಪಾಯ, ಕೆಮಯು ಇಬ್ರಾಹಿಂ ಕಾಜೂರು, ಜೆ. ಹೆಚ್ ಸಿದ್ದೀಕ್, ಕಮಾಲ್, ರಫೀಕ್ ಮದನಿ ಕಕ್ಕಿಂಜೆ, ಉಸ್ಮಾನ್ ಎಂ.ಕೆ, ಕೆರೀಂ ಕೆ.ಎಸ್, ಕೆ.ಎಚ್ ಉಮರ್ ಕುಕ್ಕಾವು, ಅಬೂಬಕ್ಕರ್ ಕುಕ್ಕಾವು, ಕೆ.ಯು ಮುಹಮ್ಮದ್ ಸಖಾಫಿ, ಶಬೀರ್, ಸಿದ್ದೀಕ್ ನೆಕ್ಕರೆ, ಪುತ್ತಾಕ ಕೂಳೂರು, ಅಬೂಬಕ್ಕರ್ ಹಾಜಿ ಸಂಸೆ, ಅಬೂಬಕ್ಕರ್ ಕೂಳೂರು, ನಝೀರ್ ಪೆರ್ದಾಡಿ, ಮುಹಮ್ಮದ್ ಶರೀಫ್ ನಿಡಿಗಲ್, ಬದ್ರುದ್ದೀನ್ ಸಖಾಫಿ, ಮುಸ್ತಫಾ ಝೈನಿ, ಅಬ್ಬಾಸ್ ಸಿ, ರಮ್ಲ ನೆಕ್ಕರೆ, ಇಸ್ಮಾಯಿಲ್ ದರ್ಖಾಸ್, ಅಯೂಬ್ ಆಲಿಕುಂಞಿ ಮೊದಲಾದವರು ಭಾಗಿಯಾಗಿದ್ದರು.

ಪೆರಾಲ್ದರ ಕಟ್ಟೆ

ಬದ್ರಿಯಾ  ಜುಮಾ ಮಸೀದಿ ಪೆರಾಲ್ದರ ಕಟ್ಟೆ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮದಮೂಲಕ ಆದರ್ಶವಾಗಿ ಆಚರಿಸಲಾಯಿತು.  ನ.10 ರಂದು ಪೆರಾಲ್ದರ ಕಟ್ಟೆಯ ಸುತ್ತಮುತ್ತಲಿನ ವಠಾರದಲ್ಲಿ ಸ್ವಚ್ಚತೆಗೊಳಿಸಿ ಪ್ರವಾದಿ ಪೈಗಂಬರ್ ಅವರು ಕಲಿಸಿದ ಸ್ವಚ್ಚತಾ ಸಂದೇಶ ಅನುಷ್ಠಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಅಬ್ಬಾಸ್ ಬಾವಿಬಳಿ, ಮಾಜಿ ಅಧ್ಯಕ್ಷ ಅಬೂಬಕ್ಕರ್ ಮಂಜೊಟ್ಟಿ,  ಕೋಶಾಧಿಕಾರಿ ಕಾಸಿಂ ಕಟ್ಟೆ,  ಬದ್ರಿಯಾ ಯಂಗ್‍ಮೆನ್ಸ್ ಅಧ್ಯಕ್ಷ ಶಮೀಮ್ ಯೂಸುಫ್, ನವಾಝ್ ಶರೀಫ್, ನಿಯಾಝ್, ಪಿಎಫ್ ಐ ಕಟ್ಟೆ ಯುನಿಟ್ ಅಧ್ಯಕ್ಷ  ನಿಝಾಮ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಜಮಾಅತ್ ನ ಪ್ರಮುಖರು, ಸಮಾನಮನಸ್ಕ ಯುವಕರು ಜೊತೆಯಾದರು.

ಪದ್ಮುಂಜ: ಖಲಂದರ್ ಷಾ ಜುಮಾ ಮಸೀದಿ ಪದ್ಮುಂಜ  ಹಾಗು ಅಂಗ ಸಂಸ್ಥೆಗಳ ವತಿಯಿಂದ ಈದ್ ಮೀಲಾದ್ ಸಂದೇಶ ಜಾಥಾ ನಡೆಯಿತು. ಜಮಾಅತಿನ ಅಧ್ಯಕ್ಷ ಕಾಸಿಂ ಪದ್ಮುಂಜ, ಕಾರ್ಯದರ್ಶಿ ಯೂಸುಫ್ ಅಂತರ,  ಅಬೂಬಕ್ಕರ್  ಪದ್ಮುಂಜ, ಸುಲೈಮಾನ್ ಪದ್ಮುಂಜ, ಅಶ್ರಫ್ ಅಂತರ, ಕಾರ್ಯದರ್ಶಿ ನಿಝಾಮುದ್ದೀನ್ ನನ್ಯ, ಖತೀಬ್ ಮಸ್ ಊದ್ ಸ ಅದಿ ಪದ್ಮುಂಜ, ಸಅದ್ ಹಿಮಮಿ ಪದ್ಮುಂಜ ಹಾಗು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸವಣಾಲು: ಸವಣಾಲು ಬದ್ರಿಯಾ ಜುಮಾ ಮಸೀದಿ  ಮತ್ತು ಹಿಮಾಯತುಲ್ ಇಸ್ಲಾಂ ಮದರಸ ಇದರ ಜಂಟಿ ಆಶ್ರಯದಲ್ಲಿ ಅತ್ಯಂತ ಸಂಭ್ರಮದ ಮೀಲಾದುನ್ನಬಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣವನ್ನು ಮಸೀದಿ ಧರ್ಮ ಗುರುಗಳಾದ ಕೆ.ಟಿ.ಅಬ್ದುಲ್ ಹಮೀದ್ ಸಹದಿ ನೆರೆವೇರಿಸಿದರು.  ಕಾರ್ಯಕ್ರಮದ ಉದ್ಘಾಟನೆಯನ್ನು ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷ ಯಾಕುಬ್ ಮುಸ್ಲಿಯಾರ್ ನೆರೆವೇರಿಸಿದರು ಮತ್ತು ಎಂ. ಜಿ ತಲ್ ಹತ್  ಸವಣಾಲು ಪ್ರಾಸ್ತಾವಿಕವಾಗಿ ಮಾತಾಡಿ ಕಾರ್ಯಕ್ರಮದ ವಿಷೇಶತೆಯನ್ನು ತಿಳಿಸಿದರು. ಜಿ. ಮುಹಮ್ಮದ್ ಅಶ್ರಫ್ ಫೈಝಿ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಸೀದಿಯ ಮುಹಜ್ಝಿ ಉಸ್ತಾದ್ ಉಮರ್ ಮುಸ್ಲಿಯಾರ್ ವಹಸಿದ್ದರು.

ವೇದಿಕೆಯಲ್ಲಿ ಮಾಜಿ ಅದ್ಯಕ್ಷ ಡಿ. ರಫೀಕ್,  ಕೆರೆಕೋಡಿ ಅಹ್ಮದ್,  ಟಿ. ಕೆ ಸುಲೈಮಾನ್ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News