×
Ad

ವಿದೇಶದಲ್ಲಿ ನವಾಝ್ ಚಿಕಿತ್ಸೆಗೆ ಪಾಕ್ ಸರಕಾರ ಅನುಮತಿ

Update: 2019-11-10 23:05 IST

ಇಸ್ಲಾಮಾಬಾದ್, ನ. 10: ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಮಾಜಿ ಪ್ರಧಾನಿ ನವಾಝ್ ಶರೀಫ್‌ಗೆ ಪಾಕಿಸ್ತಾನ ಸರಕಾರವು ಅವಕಾಶ ನೀಡಲಿದೆ ಎಂದು ಆ ದೇಶದ ವಿದೇಶ ಸಚಿವ ಶಾ ಮೆಹ್ಮೂದ್ ಖುರೇಶಿ ರವಿವಾರ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಅತಿ ದೀರ್ಘಾವಧಿಗೆ ಪ್ರಧಾನಿಯಾಗಿದ್ದ ನವಾಝ್ ಶರೀಫ್, ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಅವರ ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ, ಅವರನ್ನು ಲಾಹೋರ್‌ನ ಸರ್ವಿಸಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ನ್ಯಾಯಾಲಯವೊಂದು ಅವರಿಗೆ 8 ವಾರಗಳ ಕಾಲ ಜಾಮೀನು ನೀಡಿದ್ದು ಮನೆಯಲ್ಲಿದ್ದಾರೆ.

ಅವರ ಜೀವ ರಕ್ಷಣೆಗಾಗಿ ವಿದೇಶದಲ್ಲಿ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿದೆ ಎಂದು ವೈದ್ಯರು ಹೇಳಿರುವ ಹಿನ್ನೆಲೆಯಲ್ಲಿ, ಅವರ ವಿದೇಶ ಪ್ರಯಾಣಕ್ಕಿರುವ ಎಲ್ಲ ಕಾನೂನು ತೊಡಕುಗಳನ್ನು ನಿವಾರಿಸಲಾಗುವುದು ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News