ಇಸ್ಮಾಯಿಲ್ ಸಅದಿ ಮಾಚಾರ್ 'ಖಸೀದತುಲ್ ಬುರ್ದಾ' ಕನ್ನಡಾನುವಾದ ಭಾಗ 2 ಮದೀನಾದಲ್ಲಿ ಲೋಕಾರ್ಪಣೆ

Update: 2019-11-11 09:25 GMT

ಮದೀನಾ ಮುನವ್ವರ: ಇಸ್ಮಾಯಿಲ್ ಸಅದಿ ಮಾಚಾರ್ ಅವರು ಬರೆದ ಖಸೀದತುಲ್ ಬುರ್ದಾ ಕನ್ನಡಾನುವಾದ ಭಾಗ 2 ಮದೀನಾ ಮುನವ್ವರದಲ್ಲಿ ಲೋಕಾರ್ಪಣೆಗೊಂಡಿತು.

ಅಲ್ ಖಾದಿಸೀಯ ಎಜುಕೇಶನ್ ಅಕಾಡಮಿ ಕಾವಳಕಟ್ಟೆ ಸಾರಥಿ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಅವರು, ಪೆರೋಡ್ ಉಸ್ತಾದ್ ಅವರ ಪುತ್ರ ಮುಹಮ್ಮದ್ ಅಝ್ಹರಿಯವರಿಗೆ ಖಸೀದತುಲ್ ಬುರ್ದಾ ಪುಸ್ತಕ ನೀಡುವ ಮೂಲಕ ಬಿಡುಗೊಳಿಸಿದರು. ನಂತರ ಮಾತನಾಡಿದ ಹಝ್ರತ್ ಅವರು ಕಳೆದ ಬಾರಿ  ಖಸೀದತುಲ್ ಬುರ್ದಾದ ಒಂದು ಭಾಗವನ್ನು  ಬಿಡುಗೊಳಿಸಿಲಾಗಿದ್ದು, ಈ ಬಾರಿ ಅದರ ಎರಡನೇ ಆವೃತ್ತಿ ಯನ್ನು ಬಿಡುಗಡೆಗೊಳಿಸಿ, ಸಂಪೂರ್ಣಗೊಳಿಸಿದ್ದಾರೆ ಎಂದು ಶುಭ ಹಾರೈಸಿದರು.

ಈ ವೇಳೆ  ಇಸ್ಮಾಯಿಲ್ ಸಅದಿ ಮಾಚಾರ್ ಮಾತನಾಡಿ, ಖಸೀದತುಲ್ ಬುರ್ದಾ ಕನ್ನಡಾನುವಾದದ ಎರಡು ಭಾಗವು ಕೂಡ ಪವಿತ್ರ ಮದೀನಾದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಪುಸ್ತಕವು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಅವರನ್ನು ಇನ್ನಷ್ಟು ಪ್ರೀತಿಸಲು ಕಾರಣವಾಗಲಿ ಎಂದ ಅವರು, ಈ ಪುಸ್ತಕ ರಚನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.

ಎಸ್.ವೈ.ಎಸ್ ದ.ಕ. ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟೋರಿ, ದಾರುಲ್ ಇರ್ಷಾದ್ ಮದೀನಾ ಎಜುಕೇಶನ್ ಮಾಣಿ ಇದರ ಮದೀನಾ ಘಟಕದ ಆರ್ಗನೈಸರ್ ಉಮ್ಮರ್ ಕಾಮಿಲ್ ಸಖಾಫಿ ಪರಪ್ಪು, ಅಬೂಬಕರ್ ಹಾಜಿ ರೈಸ್ಕೋ, ತಾಜುದ್ದೀನ್ ಸುಳ್ಯ, ನಝೀರ್ ಹಾಜಿ ದುಬೈ, ಅಲ್ ಹಾಜ್ ಸಲೀಂ ಮದನಿ, ಅಶ್ರಫ್ ಅಮ್ಜದಿ, ಝೈನುದ್ದೀನ್ ಪಕ್ಷಿಕೆರೆ, ಅಶ್ರಫ್ ಸಖಾಫಿ ನೂಜಿ, ಮತ್ತಿತರರು ಉಪಸ್ಥಿತರಿದ್ದರು.

Writer - ವರದಿ : ಹಕೀಂ ಬೋಳಾರ್

contributor

Editor - ವರದಿ : ಹಕೀಂ ಬೋಳಾರ್

contributor

Similar News