×
Ad

ಒಮಾನ್‍: ನೀರಿನ ಪೈಪ್‍ಲೈನ್ ಕಾಮಗಾರಿ ವೇಳೆ ದುರಂತ; ಭಾರತೀಯರೆನ್ನಲಾದ ಆರು ಕಾರ್ಮಿಕರು ಮೃತ್ಯು

Update: 2019-11-12 17:22 IST
Photo: gulfnews

ದುಬೈ: ಒಮಾನ್‍ನಲ್ಲಿ ನೀರಿನ ಪೈಪ್ ಲೈನ್ ಯೋಜನೆಗೆ ಗುಂಡಿ ಅಗೆಯುತ್ತಿದ್ದ ಸ್ಥಳದಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ  ಭಾರತೀಯ ಸಂಜಾತರೆಂದು ತಿಳಿಯಲಾದ ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಮಸ್ಕತ್‍ನ ಸೀಬ್ ಪ್ರದೇಶದಲ್ಲಿ ರವಿವಾರ ಈ ದುರ್ಘಟನೆ ಸಂಭವಿಸಿದೆಯೆಂದು ಭಾರತೀಯ ದೂತಾವಾಸದ ಟ್ವೀಟ್ ಮಾಹಿತಿ ನೀಡಿದೆ. ಘಟನೆ ಕುರಿತು ಸ್ಪಷ್ಟ ಮಾಹಿತಿ ಹಾಗೂ ಮೃತರ ಗುರುತು ಪತ್ತೆಗಾಗಿ ಭಾರತೀಯ ದೂತಾವಾಸ ಕಚೇರಿ ಒಮಾನ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದೆ ಎಂದೂ ಅದು ತಿಳಿಸಿದೆ.

ಹದಿನಾಲ್ಕು ಮೀಟರ್ ಆಳದಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  ಮಣ್ಣಿನಡಿ ಹೂತು ಹೋದ ಶವಗಳನ್ನು ಮೇಲೆತ್ತಲು ರಕ್ಷಣಾ ತಂಡಗಳು 12 ಗಂಟೆಗಳ ಕಾಲ ಶ್ರಮಿಸಬೇಕಾಯಿತು ಎಂದು ಮಸ್ಕತ್ ಡೈಲಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News