ನ.16 ರಂದು ಬಿಐಟಿಯಲ್ಲಿ 'ಸಮುದಾಯದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಜಮಾಅತ್ ಗಳ ಪಾತ್ರ' ಶೈಕ್ಷಣಿಕ ಕಾರ್ಯಾಗಾರ

Update: 2019-11-12 14:40 GMT

ಮಂಗಳೂರು: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯು 'ಸಮುದಾಯದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಜಮಾಅತ್ ಗಳ ಪಾತ್ರ' ಎಂಬ ಕೇಂದ್ರೀಯ ವಿಷಯದ ಕುರಿತು ಒಂದು ದಿನದ 'ಶಿಕ್ಷಣ ಜಾಗೃತಿ ಕಾರ್ಯಾಗಾರ'ವನ್ನು ಹಮ್ಮಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜಮಾಅತ್ ಪ್ರತಿನಿಧಿಗಳಿಗಾಗಿ ಸಂಘಟಿಸಲಾಗುತ್ತಿರುವ ಈ ಕಾರ್ಯಾಗಾರವು  ನ. 16 ರಂದು ಮಂಗಳೂರು ವಿಶ್ವ ವಿದ್ಯಾಲಯದ  ಸಮೀಪ, ಇನೋಳಿಯಲ್ಲಿರುವ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಕ್ಯಾಂಪಸ್ ನಲ್ಲಿ ಬೆಳಗ್ಗೆ 9:15 ರಿಂದ 1:30 ರ ತನಕ ನಡೆಯಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸವಿಸ್ತಾರ ಚರ್ಚೆ, ಸಂವಾದಗಳನ್ನು ನಡೆಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವ ಮತ್ತು ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಯುತ್ತಿದೆ ಎಂದು 'ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ'ಗಳ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರು ತಿಳಿಸಿದ್ದಾರೆ.

ಕೆಲವು ವರ್ಷಗಳಲ್ಲಿ ಶಿಕ್ಷಣ ರಂಗದಲ್ಲಿ ಮುಸ್ಲಿಂ ಸಮುದಾಯವು ಕೆಲವು ಮಹತ್ವದ ಬೆಳವಣಿಗೆಗಳನ್ನು ಕಂಡಿದೆ. ಸಮುದಾಯವನ್ನು ಶೈಕ್ಷಣಿಕವಾಗಿ ಮುಂದೆ ತರುವ ಶ್ರಮದಲ್ಲಿ ನಮ್ಮ ಕರಾವಳಿ ಪ್ರದೇಶದ ಮಸೀದಿ ಜಮಾಅತ್ ಗಳು ಬಹಳ ಗಣ್ಯ ಪಾತ್ರ ನಿರ್ವಹಿಸಿವೆ. ಇಂದಿನ ಕಠಿಣ ಪೈಪೋಟಿಯ ಯುಗದಲ್ಲಿ ನಮ್ಮ ಹೊಸ ಪೀಳಿಗೆಯ ಸದಸ್ಯರಿಗೆ ಶಿಕ್ಷಣರಂಗದಲ್ಲಿ ಲಭ್ಯವಿರುವ ಆಯ್ಕೆಗಳು, ಅವಕಾಶಗಳು, ಸವಲತ್ತುಗಳು ಅಲ್ಲದೇ ವಿಶೇಷವಾಗಿ ಎಲ್ಲ ಸಮುದಾಯಗಳ ಜೊತೆ ಸಾಮಾಜಿಕ ಸಂಬಂಧಗಳ ಸುಧಾರಣೆ, ಕ್ಯಾಂಪಸ್ ಗಳ ಮೂಲಕ ಚಾರಿತ್ರ್ಯ ನಿರ್ಮಾಣ ಮತ್ತು ಮಾಧಕ ವ್ಯಸನಗಳ ಪಿಡುಗಿನ ಬಗ್ಗೆ ಸಮುದಾಯಗಳಲ್ಲಿ ಜಾಗ್ರತಿ ಮೂಡಿಸುವ ವಿಧಾನಗಳು ಇತ್ಯಾದಿ ವಿವಿಧ ವಿಷಯಗಳಲ್ಲಿ ವೃತ್ತಿಪರ ತಜ್ಞರ ಮೂಲಕ ಸಮರ್ಥ ಮಾರ್ಗದರ್ಶನ ಒದಗಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ  ಸಮುದಾಯದ ಹಿರಿಯರು, ವಿದ್ವಾಂಸರು ಮತ್ತು ವಿವಿಧ ಮಸೀದಿ, ಜಮಾಅತ್ ಗಳ ನಾಯಕರ ಸಕ್ರಿಯ ಸಹಭಾಗಿತ್ವದಲ್ಲಿ ಇಂತಹದೊಂದು ವಿಶಿಷ್ಟ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಕಾರ್ಯಾಗಾರದ ನಿರ್ವಾಹಕರಾದ ಡಾ. ಅಝೀಜ್ ಮುಸ್ತಾಫಾ ಹೇಳಿದ್ದಾರೆ.

ವಿವರಗಳಿಗಾಗಿ ಮೊ.ಸಂ: 96201 57885 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News