ಗಾಂಧೀಜಿಯ ಬದುಕಿನ ಅಪರೂಪದ ಛಾಯಾಚಿತ್ರ: ಶಾಸಕ ರಾಜೇಶ್

Update: 2019-11-12 13:40 GMT

ಬಂಟ್ವಾಳ, ನ. 12: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಸೋಮವಾರದಿಂದ ಮೂರುದಿನಗಳ ಕಾಲ ಆಯೋಜಿಸಿರುವ ಗಾಂಧೀಜಿ ಯವರ ಜೀವನ ಚರಿತ್ರೆ ತಿಳಿಸುವ ಛಾಯಾಚಿತ್ರ ಪ್ರದರ್ಶನವನ್ನು ಶಾಸಕ ರಾಜೇಶ್ ನಾಯ್ಕ್ ಅವರು ವೀಕ್ಷಿಸಿದರು. 

ಛಾಯಾಚಿತ್ರವನ್ನು ವೀಕ್ಷಿಸಿ ಮಾತನಾಡಿದ ಅವರು, ಗಾಂಧೀಜಿ ಅವರ ಬದುಕಿನ ಸಮಗ್ರ ಮಾಹಿತಿಗಳನ್ನೊಳಗೊಂಡ ಅಪರೂಪದ  ಛಾಯಾಚಿತ್ರಗಳು ಇಲ್ಲಿದ್ದು. ಇವುಗಳನ್ನು ವೀಕ್ಷಿಸಿ ಅವರ ಬದುಕಿನ ಸಾಧನೆಗಳ ಪರಿಚಯ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ  ಕಲ್ಪಿಸಿರುವುವುದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯ ಶ್ಲಾಘನೀಯ. ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಹೇಳಿದರು.

ತಹಶೀಲ್ದಾರ್ ರಶ್ಮಿ ಎಸ್. ಆರ್., ತಾಪಂ ಸದಸ್ಯ ಪ್ರಭಾಕರ ಪ್ರಭು, ರಾಯಿ ಪಂ ಸದಸ್ಯ ಹರೀಶ್ ಆಚಾರ್ಯ, ಪುರುಷೋತ್ತಮ ಶೆಟ್ಟಿ, ರಮಾನಾಥ ರಾಯಿ ಮೊದಲಾದವರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News