ಪರ್ಲಿಯಾದಲ್ಲಿ 'ಮೀಲಾದ್ ಸಂದೋಲಾ' ಕಾರ್ಯಕ್ರಮ

Update: 2019-11-12 13:49 GMT

ಬಂಟ್ವಾಳ, ನ. 12: ಮೀಲಾದುನ್ನಬಿ ಪ್ರಯುಕ್ತ ಫ್ರೆಂಡ್ಸ್ ಗ್ರೂಪ್ ಪರ್ಲಿಯಾ ಇದರ ವತಿಯಿಂದ ಮೀಲಾದ್ ಸಂದೋಲಾ ಕಾರ್ಯಕ್ರಮ ಪರ್ಲಿಯಾ ವಾಲಿಬಾಲ್ ಮೈದಾನದ ಮರ್ಹೂಮ್ ಉವೈಸಿ ವೇದಿಕೆಯಲ್ಲಿ ನಡೆಯಿತು.

ಫ್ರೆಂಡ್ಸ್ ಗ್ರೂಪ್ ಪರ್ಲಿಯಾ ಇದರ ಅಧ್ಯಕ್ಷ ಸಿರಾಜ್ ಎನ್.ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲ್ ಇಂಡಿಯಾ ಇಮಾಮ್ ಕೌನ್ಸಿಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ದಾರಿಮಿ ಉಸ್ತಾದ್ ದುಆಃ ನೆರವೇರಿಸಿದರು. ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಪ್ರಸಕ್ತ ಸನ್ನಿವೇಶ ಮತ್ತು ಪ್ರವಾದಿ ಜೀವನದ ಕುರಿತು ಮಾತನಾಡಿದರು.

ಪರ್ಲಿಯಾ ಪರಿಸರದ ಲೈನ್‍ಮೇನ್‍ಗಳಾದ ಜಯರಾಮ, ಹನುಮೇಷ , ರಾಜೇಶ, ಕಥಾ ಪ್ರಸಂಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಅರ್ಪಾಝ್ ಹಾಗೂ ಲತೀಫ್ ಹಾಜಿ, ಹಮೀದ್ ಬಿ.ಸಿ ಅವರನ್ನು ಫ್ರೆಂಡ್ಸ್ ಗ್ರೂಪ್ ಪರ್ಲಿಯಾ ವತಿಯಿಂದ ಸನ್ಮಾನಿಸಲಾಯಿತು. 

ಕವಿಗೋಷ್ಠಿ: ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕವಿ ಎಂ.ಬಿ ಬಶೀರ್ ರವರು ಅಲಂಕರಿಸಿದರು. ರಹಿಮಾನ್ ಮಠ, ಅಶ್ರಫ್ ಅಪೋಲೋ, ರಿಯಾಝ್ ಪರಂಗಿಪೇಟೆ, ಶರೀಫ್ ಪರ್ಲಿಯಾ, ಶಾಹುಲ್ ಎಸ್.ಪಿ, ರಶೀದ್ ನಂದಾವರ ಇವರು ತನ್ನ  ಕವನಗಳನ್ನು ವಾಚಿಸಿದರು.

ವೇದಿಕೆಯಲ್ಲಿ ಉದ್ಯಮಿ ಲತೀಫ್ ಹಾಜಿ, ಮುಹಿಯುದ್ದೀನ್ ಜುಮಾ ಮಸೀದಿ ಇದರ ಆಡಳಿತ ಸಮಿತಿ ಸದಸ್ಯ ಮುಹಮ್ಮದ್ ಸಾಗರ್, ಸಮಾಜ ಸೇವಕ ಶಾಹುಲ್ ಎಸ್.ಪಿ, ಇಕ್ಬಾಲ್ ಮದ್ದ, ಮಂಡಾಡಿ ಯತೀಮ್ ಖಾನ ಇದರ ಸ್ಥಾಪಕ ಅಧ್ಯಕ್ಷ ಹಮೀದ್ ಬಿ.ಸಿ., ಉದ್ಯಮಿ ಹಂಝ ಕಲ್ಲುಮನೆ ಉಪಸ್ಥಿತರಿದ್ದರು. ಶಾಲಿಂಗ್ ಚೈನ್ ಮಾರ್ನಬೈಲ್ ಕಾಟ್ರಸ್ ಇವರ ವತಿಯಿಂದ ಅತ್ಯಾಕರ್ಷಕವಾದ ತಾಲೀಮು ಶಕ್ತಿ ಪ್ರದರ್ಶನ ನಡೆಯಿತು.
ಇಕ್ಬಾಲ್ ಮದ್ದ ಸ್ವಾಗತಿಸಿ, ಸಾಮಾಜಿಕ ಕಾರ್ಯಕರ್ತ ಅಕ್ಬರ್ ಅಲಿ ಪೊನ್ನೋಡಿಯವರು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News