ಬಂಟ್ವಾಳ: ಅಂತಾರಾಜ್ಯ ಕೃಷಿ ಅಧ್ಯಯನ ಪ್ರವಾಸ

Update: 2019-11-12 14:05 GMT

ಬಂಟ್ವಾಳ, ನ. 12: ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ವಿಟ್ಲ ಇದರ ಸದಸ್ಯರಿಗೆ 5 ದಿನದ ಅಂರಾರಾಜ್ಯ ಕೃಷಿ ಅಧ್ಯಯನ ಪ್ರವಾಸವು ನಡೆಯಿತು.

ಮಹರಾಷ್ಟ್ರ ಸೋಲಾಪುರ ಐಸಿಎಆರ್‍ನ ದಾಳಿಂಬೆ ಸಂಶೋಧನಾ ಕೇಂದ್ರ, ಬಾರಮತಿ ಕೆವಿಕೆ ಅಣ್ಣಾ ಹಜಾರೆಯವರು ಮಾಡಿದ ಮಾದರಿ ಗ್ರಾಮ ರಾಲೇಗಾನ್, ಸಹ್ಯಾದ್ರಿ ಫಾರ್ಮ್, ಟಾಟಾ ಕಂಪನಿಯ ದೀನದಯಾಲ್ ಉಪಾದ್ಯಾಯ ತರಬೇತಿ ಕೇಂದ್ರ, ರಾವುರು ಯುನಿವರ್ಸಿಟಿ, ಸಿರ್ಡಿ ಮಂದಿರ, ಶನಿಸಿಂಗಾಪುರ ದೇವಸ್ಥಾನ, ಬಾಗಲಕೋಟೆಯ ತೋಟಗಾರಿಕಾ ಯುನಿವರ್ಸಿಟಿಗೆ ಭೇಟಿ ನೀಡಿದರು.

ಮಂಗಳೂರು ಕೆವಿಕೆಯ ರಶ್ಮಿ, ಡಾ. ಕೇದಾರನಾಥ್, ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ನಿರ್ದೇಶಕರಾದ ಲಕ್ಷ್ಮೀನಾರಾಯಣ ಅಡ್ಯಂತಾಯ, ಕೃಷ್ಣಮೂರ್ತಿ ಕಟ್ಟೆ, ಹಿರಿಯ ಸದಸ್ಯ ಗೋಪಾಲ ಆಚಾರ್ಯ ಮಂಚಿ, ಕಛೇರಿ ಸಹಾಯಕ ಜನಾರ್ಧನ ಪದ್ಮಶಾಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News