ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಉಮಾನಾಥ ಕೋಟ್ಯಾನ್

Update: 2019-11-12 14:10 GMT

ಮೂಡುಬಿದಿರೆ : ಪಾಲಡ್ಕ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ರೂ 1.70 ಕೋ. ವೆಚ್ಚದಲ್ಲಿ ವಿವಿಧ ಕಡೆಗಳಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು. 

ನಂತರ ಮಾತನಾಡಿದ ಅವರು ಮೂಲಭೂತ ಸೌಕರ್ಯವಾಗಿರುವ ರಸ್ತೆಯು ಉತ್ತಮ ರೀತಿಯಲ್ಲಿರಬೇಕು. ಮುಂದಿನ 3 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲಾ ರಸ್ತೆಗಳು ಕೂಡಾ ಸಂಪೂರ್ಣವಾಗಿ ಅಭಿವೃದ್ಧಿಯನ್ನು ಹೊಂದಬೇಕು. ಈ ನಿಟ್ಟಿನಲ್ಲಿ ಕಾಂಟ್ರಾಕ್ಟುದಾರರು ಉತ್ತಮ ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆಯನ್ನು ನೀಡಬೇಕು ಎಂದು ಹೇಳಿದರು. 

ಪಾಲಡ್ಕದ ಗೋಕಲ್ಲಿನಿಂದ ಚರ್ಚ್ ಮೂಲಕ ಕೊಡಮಣಿತ್ತಾಯ ದೈವಸ್ಥಾನದ ವರೆಗೆ 95 ಲಕ್ಷ, ಕಡಂಡಲೆ ರಾಮೋನಗರದಿಂದ ಬೊಲ್ಲೆಮಾರ್ ವರೆಗೆ ರೂ 45 ಲಕ್ಷ ಹಾಗೂ ಗೇಂದಬೆಟ್ಟು ಮಾಡಾಯಿ ಹಾಗೂ ಶೆಡ್ಯಾ ಶೆಟ್ಟಿಬೆಟ್ಟು ವರೆಗೆ ರೂ 30 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆಯನ್ನು ಮಾಡಲಾಯಿತು. 

ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಪಾಲಡ್ಕ ಗ್ರಾ.ಪಂ.ಸದಸ್ಯೆ ಸುನೀತಾ, ಸದಸ್ಯರಾದ ಪ್ರವೀಣ್ ಸಿಕ್ವೇರಾ, ವೆಂಕಪ್ಪ, ಶಾರದಾ, ತಾ.ಪಂ ಮಾಜಿ ಉಪಾಧ್ಯಕ್ಷ ರಮೇಶ್ ಪೂಜಾರಿ, ಗ್ರಾ.ಪಂ. ಮಾಜಿ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಸುಖೇಶ್ ಶೆಡ್ಯಾ, ಇಂಜಿನಿಯರ್ ರಾಘವೇಂದ್ರ, ಕಾಂಟ್ರಾಕ್ಟರ್‍ಗಳಾದ ಡಿ.ಆರ್.ರಾಜು. ಬಾಲರಾಜು, ರೋಶನ್, ಬಿಜೆಪಿ ಮುಖಂಡರಾದ ಕೆ.ಆರ್.ಪಂಡಿತ್, ಅಜೇಯ್ ರೈ, ಪಾಲಡ್ಕ ಸತೀಶ್, ಉದಯ, ನಿವೃತ್ತ ಶಿಕ್ಷಕ ಆಂಡ್ರ್ಯೂ ಡಿಸೋಜಾ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News