​ಮಂಗಳೂರು ಮನಪಾ ಚುನಾವಣೆ: ಶೇ. 59.67 ಮತದಾನ

Update: 2019-11-12 15:22 GMT

ಮಂಗಳೂರು, ನ.12: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಮಂಗಳವಾರ ನಡೆದ ಚುನಾಚಣೆಯಲ್ಲಿ ಶೇ.59.67ರಷ್ಟು ಮತದಾನ ನಡೆದಿದೆ.

3,94,894 ಮತದಾರರ ಪೈಕಿ 2,35,628 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದ ಮತದಾರರ ಪೈಕಿ 1,13,084 ಪುರುಷರು, 1,22,527 ಸ್ತ್ರೀಯರು ಮತ ಚಲಾಯಿಸಿದ್ದಾರೆ. ಅಲ್ಲದೆ, 17 ತೃತೀಯ ಲಿಂಗಿಗಳೂ ಮತ ಚಲಾಯಿಸಿದ್ದಾರೆ.

ಸ್ತೀಯರದ್ದೇ ಮೇಲುಗೈ: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಲ್ಲಿ 3,87,465 ಮತದಾರರಿದ್ದು, ಇದರಲ್ಲಿ 1,99,989 ಪುರುಷರಿದ್ದರೆ, 1,87,465 ಸ್ತ್ರೀಯರಿದ್ದಾರೆ. 63 ತೃತೀಯ ಲಿಂಗಿಗಳಿದ್ದಾರೆ. ಮತದಾರರ ಸಂಖ್ಯೆಯಲ್ಲಿ ಸ್ತ್ರೀಯರು ಎರಡನೇ ಸ್ಥಾನದಲ್ಲಿದ್ದರೂ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ವಿಶೇಷ.

60 ವಾರ್ಡ್‌ಗಳ 180 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ನ.14 ರಂದು ಫಲಿತಾಂಶ ಹೊರಬೀಳಲಿದೆ. ಸ್ಟೇಟ್ ಬ್ಯಾಂಕ್ ಬಳಿಯ ರೋಸಾರಿಯೋ ಹೈಸ್ಕೂಲ್ ನಲ್ಲಿ ಮತಎಣಿಕೆ ಕಾರ್ಯ ಗುರುವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮಧ್ಯಾಹ್ನದೊಳಗೆ ಮತಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News