ಉಡುಪಿ: ರಾಜ್ಯಮಟ್ಟದ 'ಬುಡೋಕಾನ್ ಧಮಾಕ'

Update: 2019-11-12 16:18 GMT

ಉಡುಪಿ, ನ.12: ಬುಡೋಕಾನ್ ಕರಾಟೆ ಎಂಡ್ ಸೆಲ್ಫ್ ಡಿಫೆನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಇದರ ಆಶ್ರಯದಲ್ಲಿ ಎರಡು ದಿನಗಳ ಮೂರನೇ ರಾಜ್ಯಮಟ್ಟದ ಅಂತರ್‌ಶಾಖಾ ಕರಾಟೆ ಸ್ಪರ್ಧಾಕೂಟ ‘ಬುಡೋಕಾನ್ ಧಮಾಕ-2019’ ನ.16 ಮತ್ತು 17ರಂದು ದೊಡ್ಡಣಗುಡ್ಡೆ ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಕರಾಟೆ ಮುಖ್ಯ ಶಿಕ್ಷಕ ಹಾಗೂ ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ 1000ಕ್ಕೂ ಅಧಿಕ ಕರಾಟೆ ಪಟು ಗಳು ಹಾಗೂ 150ಕ್ಕೂ ಅದಿಕ ತೀರ್ಪುಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಸ್ಪರ್ಧೆಗಳು 13 ವರ್ಷಕ್ಕಿಂತ ಕೆಳಗಿನ ಹಾಗೂ 13 ವರ್ಷಕ್ಕಿಂತ ಮೇಲಿನವರ ಎರಡು ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಪ್ರಥಮ ಮೂರು ಸ್ಥಾನ ಪಡೆಯುವ ಕರಾಟೆಪಟುಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಎಂದರು.

ಕರಾಟೆ ಸ್ಪರ್ಧಾಕೂಟವನ್ನು ನ.16ರ ಬೆಳಗ್ಗೆ 9:00ಗಂಟೆಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾದಿಕಾರಿ ಜಿ.ಜಗದೀಶ್ ಉದ್ಘಾಟಿಸಲಿದ್ದಾರೆ. ಕೆ.ದಿವಾಕರ್ ಐತಾಳ್, ಹರಿಯಪ್ಪ ಕೋಟ್ಯಾನ್, ಪುರುಷೋತ್ತಮ ಶೆಟ್ಟಿ, ಮುನಿಯಾಲು ಉದಯಕುಮಾರ್ ಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ನ.17ರ ರವಿವಾರ ಸಂಜೆ 4:00ಗಂಟೆಗೆ ಸಮಾರೋಪ ಸಮಾರಂಭವು ನಡೆಯಲಿದ್ದು, ಇದರಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಕರಾಟೆ ಮುಖ್ಯ ಶಿಕ್ಷಕರಾದ ಲಕ್ಷ್ಮೀನಾರಾಯಣ ಬಿ. ಆಚಾರ್ಯ, ಸತೀಶ್ ಬೆಳ್ಮಣ್, ಸ್ವಾಗತ ಸಮಿತಿ ಅಧ್ಯಕ್ಷ ಕೃಷ್ಣ ಶ್ರೀಧರನ್, ಉಪಾಧ್ಯಕ್ಷ ರಮೇಶ ಬಾರಿತ್ತಾಯ, ಗಣೇಶ್ ಎರ್ಮಾಳ್, ರೋಹಿತಾಕ್ಷ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News