ಉಡುಪಿ ಜಿಲ್ಲೆ: 3 ಸ್ಥಾನಗಳಿಗೆ ಶಾಂತಿಯುತ ಮತದಾನ

Update: 2019-11-12 17:09 GMT

ಉಡುಪಿ, ನ.12: ಉಡುಪಿ ಜಿಲ್ಲೆಯ ಒಂದು ತಾಪಂ ಹಾಗೂ ಎರಡು ಗ್ರಾಪಂ ಸ್ಥಾನಗಳಿಗೆ ಇಂದು ನಡೆದ ಉಪಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಜನರು ಮತದಾನಕ್ಕೆ ವಿಶೇಷ ಆಸಕ್ತಿಯನ್ನು ತೋರಿಸಲಿಲ್ಲ.

ಬ್ರಹ್ಮಾವರ ತಾಲೂಕು ಬಾರಕೂರು ತಾಲೂಕು ಪಂಚಾಯತ್ ಸ್ಥಾನಕ್ಕೆ ಇಂದು ನಡೆದ ಮತದಾನದಲ್ಲಿ ಶೇ.41.99 ಮಂದಿ ಮತದಾನ ಮಾಡಿದರು. ಕ್ಷೇತ್ರದ ಒಟ್ಟು 7612 ಮತದಾರರ ಪೈಕಿ 3196 ಮಂದಿ ಇಂದು ಮತ ಚಲಾಯಿಸಿದರು. 3597 ಪುರುಷ ಮತದಾರರ ಪೈಕಿ 1481 ಮಂದಿ (ಶೇ.41.17) ಹಾಗೂ 4015 ಮಂದಿ ಮಹಿಳಾ ಮತದಾರ ಪೈಕಿ 1715 ಮಂದಿ (ಶೇ.42.71) ಮಂದಿ ಮತ ಚಲಾಯಿಸಿದರು.

ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಹಾಗೂ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಪಂಗಳ ತಲಾ ಒಂದು ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇ.57.98 ಮಂದಿ ಮತ ಚಲಾಯಿಸಿದರು. ಬಿಲ್ಲಾಡಿಯಲ್ಲಿ ಶೇ.58.82 ಹಾಗೂ ಮುಂಡ್ಕೂರಿನಲ್ಲಿ ಶೇ.57.07 ಮಂದಿ ಮತಚಲಾಯಿಸಿದರು.

ಬಿಲ್ಲಾಡಿಯ ಒಟ್ಟು 1253 ಮಂದಿಯಲ್ಲಿ 737 ಮಂದಿ ಹಾಗೂ ಮುಂಡ್ಕೂರು ಮುಲ್ಲಡ್ಕ ವಾರ್ಡಿನ 1146 ಮಂದಿಯಲ್ಲಿ 654 ಮಂದಿ ತಮ್ಮ ಮತಗಳನ್ನು ಚಲಾಯಿಸಿದರು ಎಂದು ಅಪರ ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News