ಬಡಕುಟುಂಬಕ್ಕೆ ನೆರವಾದ ಸಾರ್ವಜನಿಕರು: ಅಶ್ವಿತ್ ಕುಟುಂಬಕ್ಕೆ ಆರ್ಥಿಕ ನೆರವು

Update: 2019-11-12 17:24 GMT

ಪಡುಬಿದ್ರಿ: ಬೈಕ್ ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟ ಪತ್ರಿಕಾ ವಿತರಕ ಪಡುಬಿದ್ರಿ ಸುಜ್ಲಾನ್ ಪುನರ್ವಸತಿ ಕೇಂದ್ರ ಬಳಿ ನಿವಾಸಿ ಅಶ್ವಿತ್ ಕುಟುಂಬಕ್ಕೆ ವಿವಿಧ ಸಂಘ, ಸಂಸ್ಥೆಗಳು, ಸಾರ್ವಜನಿಕರು, ಪತ್ರಿಕಾ ವಿತರಕರು, ಪತ್ರಿಕಾ ಏಜೆಂಟ್ ಸಂಗ್ರಹಿಸಿದ  ಸೇರಿ ಒಟ್ಟು 1.63 ಲಕ್ಷ ರೂ. ನ್ನು  ಹಸ್ತಾಂತರಿಸುವ ಮೂಲಕ ಬಡಕುಟುಂಬಕ್ಕೆ ನೆರವಾಗಿದ್ದಾರೆ. 

ದ.ಕ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಸದಸ್ಯರು ಸಹಿತ ಗ್ಯಾರೇಜ್ ಕಾರ್ಮಿಕರು ಸಂಗ್ರಹಿಸಿದ ರೂ.1,22,000 ಮೊತ್ತದ ಸಹಾಯಧನದ ಚೆಕ್ ಅನ್ನು ಮೃತನ ಪಾಲಕರಿಗೆ ರವಿವಾರ ಹಸ್ತಾಂತರಿಸಿದರು. ಸಂಸ್ಥೆಯ ಪ್ರಮುಖರಾದ ಸಂದೀಪ್ ಸುವರ್ಣ, ರೋಶನ್ ಕರ್ಕಡ, ಸುಧೀರ್, ಸಂತೋಷ್, ಪ್ರಶಾಂತ್ ಉಚ್ಚಿಲ, ಮಧು ಉಪಸ್ಥಿತರಿದ್ದರು.

ಪತ್ರಿಕಾ ಏಜೆಂಟರು, ವಿತರಕರು, ಸಾರ್ವಜನಿಕರು. ರೂ.21,000 ಮೊತ್ತದ ಸಹಾಯಧನದ ಚೆಕ್ ಅನ್ನು ಪತ್ರಿಕಾ ಏಜೆಂಟ್ ಬಾಬು ಪೂಜಾರಿ ಮೃತನ ಪಾಲಕರಿಗೆ ಮಂಗಳವಾರ ಹಸ್ತಾಂತರಿಸಿದರು. 

ಪತ್ರಿಕಾ ವಿತರಕರಾದ ಲತೇಶ್ ಕಂಚಿನಡ್ಕ, ಯೋಗೀಶ್ ಪಡುಬಿದ್ರಿ, ದಾವೂದ್ ಹಕೀಂ, ಶಶಿಕಾಂತ್ ಪೂಜಾರಿ, ಉಪಸ್ಥಿತರಿದ್ದರು. ವಿಶ್ವಹಿಂದೂ ಪರಿಷದ್, ಭಜರಂಗದಳ ಪಡುಬಿದ್ರಿ ಘಟಕದಿಂದ ರೂ 10,000 ಹಾಗೂ ಭಗವತಿ ಪ್ರೆಂಡ್ಸ್‍ನಿಂದ ರೂ. 10,000 ಸಹಾಯವನ್ನು ಇತ್ತೀಚೆಗೆ ಮೃತನ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News