ಜೋಕಟ್ಟೆ: ಅಂಜುಮನ್ ಹಾಗು ಯೆನೆಪೊಯ ಸಹಯೋಗದ ಆಸ್ಪತ್ರೆಯಲ್ಲಿ ಚರ್ಮ ರೋಗ - ಮಕ್ಕಳ ವಿಭಾಗ ಆರಂಭ

Update: 2019-11-13 06:14 GMT

ಮಂಗಳೂರು, ನ.13: ಜೋಕಟ್ಟೆಯ ಅಂಜುಮನ್ ಖುವ್ವತುಲ್ ಇಸ್ಲಾಂ ಮತ್ತು ಯೆನೆಪೊಯ ಗ್ರಾಮೀಣ ಆರೋಗ್ಯ ಅಭಿವೃದ್ಧಿ ಕೇಂದ್ರ ಇದರ ಸಹಯೋಗದೊಂದಿಗೆ ಜೋಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಹದಿನೈದು ದಿನಕ್ಕೊಮ್ಮೆ ಮಕ್ಕಳ ಮತ್ತು ಚರ್ಮ ರೋಗದ ವಿಭಾಗ ತೆರೆಯಲಾಯಗಿದೆ. ಇದರ ಪ್ರಯುಕ್ತ ಇತ್ತೀಚೆಗೆ ಮಕ್ಕಳ ಆರೋಗ್ಯ ವಿಶೇಷ ತಪಾಸಣಾ ಶಿಬಿರ ಜರುಗಿತು.

ಶಿಬಿರವನ್ನು ಯೆನೆಪೊಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಅಖ್ತರ್ ಹುಸೈನ್ ಉದ್ಘಾಟಿಸಿದರು. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಸಿರಾಜ್ ಮನೆಗಾರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಯೆನೆಪೊಯ ಆಸ್ಪತ್ರೆಯ ಡಾ.ಪೂನಂ ನಾಯ್ಕ್, ಡಾ.ರೇಖಾ ಶೆಣೈ, ಡಾ.ಇಮ್ರಾನ್ ಪಾಶ, ಹೊಸ ಮಸೀದಿಯ ಅಧ್ಯಕ್ಷ ಜಿ.ಎಂ.ಸಂಶುದ್ದೀನ್, ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್.ಬಶೀರ್ ಅಹ್ಮದ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂಶುದ್ದೀನ್ ಜಮಾಅತ್, ಅಂಜುಮನ್ ಸಂಸ್ಥೆಯ ಮುಹಮ್ಮದ್ ರಶೀದ್, ಟಿ.ಪಿ.ಎಚ್.ಅಬ್ದುಲ್ ಖಾದರ್, ಹಾಜಿ ಬಿ.ಎಸ್.ಹುಸೈನ್, ಹಾಜಿ  ಟಿ.ಅಬೂಬಕರ್, ಅಜ್ಮಲ್ ಅಹ್ಮದ್, ಹಾಜಿ ಜೆ.ಮುಹಮ್ಮದ್, ಅಬ್ದುಲ್ ಖಾದರ್ ಗೋವಾ, ಶಾಹುಲ್ ಹಮೀದ್ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಸ್ವಾಗತಿಸಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲ ಶುಭ ರವೀಂದ್ರ ವಂದಿಸಿದರು. ವಿದ್ಯಾಸಂಸ್ಥೆಯ ಸಲಹೆಗಾರ ಹಾಜಿ ಮೂಸಬ್ಬ ಪಿ. ಬ್ಯಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News