ಗಾಂಧೀ ಜೀವನ ಚರಿತ್ರೆಯ ಛಾಯಾಚಿತ್ರ ಪ್ರದರ್ಶನದಲ್ಲಿ ಅವರ ಹತ್ಯೆಯ ಮಾಹಿತಿ ಏಕಿಲ್ಲ: ರಮಾನಾಥ ರೈ

Update: 2019-11-13 10:23 GMT

ಬಂಟ್ವಾಳ, ನ.13: ಮಹಾತ್ಮ ಗಾಂಧೀಜಿಯನ್ನು ಜೀವನ ಚಿತ್ರಣ ತಿಳಿಸುವ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಯ ಹತ್ಯೆಯ ಬಗ್ಗೆ ಮಾಹಿತಿ ಇಲ್ಲದಿರುವುದು ತನಗೆ ನೋವುಂಟು ಮಾಡಿದೆ ಮಾಜಿ ಸಚಿವ ಬಿ.ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿಯ ಪ್ರಯುಕ್ತ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಕಳೆದ ಸೋಮವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಗಾಂಧೀಜಿಯವರ ಜೀವನ ಚರಿತ್ರೆ ತಿಳಿಸುವ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಈ ಪ್ರದರ್ಶನ  ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳು ಹಾಗೂ ವಿವಿಧ ಸನ್ನಿವೇಶಗಳನ್ನು ಒಳಗೊಂಡಿದೆ. ಆದರೆ, ಗಾಂಧೀಜಿಯವರ ಹತ್ಯೆ ಭಾಗ ಉಲ್ಲೇಖವಿಲ್ಲದೇ ಇರುವುದರಿಂದ ಇಡೀ ಪ್ರದರ್ಶನವೇ ಅಪೂರ್ಣ ಎಂದು  ಅಭಿಪ್ರಾಯಿಸಿದರು.

ಗಾಂಧಿಯವರು ಸಾಮಾಜಿಕ ಸಾಮರಸ್ಯಕ್ಕೆ ಕೊಟ್ಟಂತಹ ಸಂದೇಶಗಳನ್ನು ವರ್ತಮಾನದ ದಿನಗಳಲ್ಲಿ ಮರೆಮಾಚುವಂತಹ ಪ್ರಯತ್ನ ನಡೆಯುತ್ತಿರುವುದು ವಿಷಾದಕರ. ಗಾಂಧೀಜಿಯ ತ್ಯಾಗ ಸನ್ನಿವೇಶವನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಪೂಜಾರಿ, ಸಜೀಪಮೂಡ ಗ್ರಾಪಂ ಸದಸ್ಯ ರಮೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News