ಕಲಿಕೆಯ ಸರಳೀಕರಣ ಇಂದಿನ ಅಗತ್ಯ: ಅಶೋಕ್ ಕಾಮತ್

Update: 2019-11-13 14:13 GMT

ಕುಂದಾಪುರ, ನ.13: ಕಲಿಕೆ ಎಂಬುದು ವಿದ್ಯಾರ್ಥಿಗಳಿಗೆ ಸುಲಭವಾಗ ಬೇಕು. ಕಲಿಕಾ ಪರಿಕಲ್ಪನೆಯನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ವಿದ್ಯಾರ್ಥಿ ಗಳ ಜೀವನಕ್ಕೆ ಸಂಬಂಧಿಸಿದ ಸಂಗತಿಗಳನ್ನು ಉದಾಹರಿಸುವ ಮೂಲಕ ಕಲಿಕೆಯನ್ನು ಸರಳೀಕರಣಗೊಳಿಸಬೇಕೆಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್ ಹೇಳಿದ್ದಾರೆ.

ಕುಂದಾಪುರ ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ನವೋಲ್ಲಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿ ಯಾಗಿ ಮಾತನಾಡುತಿದ್ದರು.

ಯಾವ ವಯೋಮಟ್ಟದ ವಿದ್ಯಾರ್ಥಿಗಳಿಗೆ ಯಾವ ಬಗೆಯ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂಬುದನ್ನು ಶಿಕ್ಷಕರು ಪೂರ್ವಭಾವಿಯಾಗಿ ಯೋಚಿಸಬೇಕು. ಕಲಿಕೆ ಎನ್ನುವುದು ನೀರಸವಾಗಬಾರದು. ವೈವಿಧ್ಯಮಯ ಕಲಿಕಾ ತಂತ್ರಗಳ ಮೂಲಕ ಕಲಿಕಾ ವೇಗಕ್ಕನುಗುಣವಾಗಿ ವಿದ್ಯಾರ್ಥಿಗಳು ಕಲಿಕೆಯನ್ನು ಸಂಭ್ರಮಿ ಸುವ ವಾತಾವರಣವನ್ನು ಶಿಕ್ಷಕರು ನಿರ್ಮಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಸಿದ್ಧಪ್ಪ, ಡಿ.ಇಡಿ. ಕಾಲೇಜಿನ ಪ್ರಾಂಶುಪಾಲೆ ಫಿರದೋಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ದರ್ಶನ ಕಾರ್ಯಕ್ರಮ ನಡೆಯಿತು.

ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ನಿರ್ದೇಶಕ ದೋಮಾ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿ ಕುಮಾರ ಸಚಿನ್ ಸ್ವಾಗತಿಸಿದರು. ಶೀತಲ್ ವಂದಿಸಿದರು. ಸುಹಾಸಿಸಿ ಮತ್ತು ವಿನೋದ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News