ನ.15ರಿಂದ ಮಂಗಳೂರಿನಲ್ಲಿ ಇಂಡಿಯಾ ಇಂಟರ್‌ನ್ಯಾಶನಲ್ ಟ್ರಾವೆಲ್ ಎಕ್ಸಿಬಿಷನ್

Update: 2019-11-13 14:17 GMT

ಮಂಗಳೂರು, ನ.13: ಮಂಗಳೂರಿನ ಡಾ.ಟಿ.ಎಂ.ಎ.ಪೈ ಕನ್ವೆನ್ಶನ್ ಹಾಲ್‌ನಲ್ಲಿ ನ.15ರಿಂದ 17ರವರೆಗೆ ಇಂಡಿಯಾ ಇಂಟರ್‌ನ್ಯಾಶಲ್ ಟ್ರಾವೆಲ್ ಎಕ್ಸಿಬಿಷನ್ ನಡೆಯಲಿದೆ.

ಮೂರು ದಿನಗಳ ಟ್ರಾವೆಲ್ ಎಕ್ಸಿಬಿಷನ್‌ನಲ್ಲಿ ಪ್ರವಾಸೋದ್ಯಮ, ಪ್ರಯಾಣ, ಆತಿಥ್ಯ ಮತ್ತಿತರ ಉದ್ಯಮಗಳು ಹಾಗೂ ಅಂತಾರಾಷ್ಟ್ರೀಯ ಮತ್ತು ಭಾರತೀಯ ಪ್ರವಾಸಿ ಕ್ಷೇತ್ರಗಳು, ಪ್ರವಾಸಿ ಏಜೆನ್ಸಿಗಳು ಭಾಗವಹಿಸಲಿವೆ.

ಪ್ರಮುಖವಾಗಿ ರಾಜ್ಯ ಮಟ್ಟದ ಸರಕಾರಿ ಟೂರಿಸಂ ಬೋರ್ಡ್‌ಗಳಾದ ಗುಜರಾತ್ ಟೂರಿಸಂ, ಬೆಂಗಾಲ್ ಟೂರಿಸಂ, ಮಧ್ಯ ಪ್ರದೇಶ ಟೂರಿಸಂ ಗಳೊಂದಿಗೆ ಕರಾವಳಿ ಕರ್ನಾಟಕದ ಜನಪ್ರಿಯ ರಜಾಕಾಲೀನ ಪ್ರವಾಸಗಳ ಪ್ರವರ್ತಕ ಅಪ್ನಾ ಹಾಲಿಡೇಸ್, ವೀಣಾ ವರ್ಲ್ಡ್, ಮಜೇ ಎಂಟರ್‌ಪ್ರೈಸಸ್, ಬಿಟ್ ಟ್ರಾವೆಲ್ಸ್, ಮಡಿಕೇರಿಯ ಬಿರ್ಚ್‌ವುಡ್ ರಿಟ್ರೀಟ್, ಹಾಲಿಡೇ ಮಂತ್ರ, ಚಿಕ್ಕಮಗಳೂರಿನ ಈಗಲ್ ಐ ರಿಸಾರ್ಟ್, ಟ್ರಾವೆಜಾ, ಓರಝಾ ಹಾಲಿಡೇಸ್ ನೇಪಾಳ, ಫ್ರೀಡಂ ಹಾಲಿಡೇಸ್ ಗೋವಾ ಮುಂತಾದ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಲಿವೆ.

ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲಾ ಪ್ರವಾಸೋದ್ಯಮ ವಿಶೇಷ ಪೆವಿಲಿಯನ್ ನಲ್ಲಿ ಈ ಪ್ರವಾಸ ಪ್ರದರ್ಶನದಲ್ಲಿ ಪ್ರಚಾರ ಗೊಳ್ಳಲಿದ್ದು, ಸಾಯಿರಾಧ ಹೆರಿಟೇಜ್, ಯುವ ಮೆರೀಡಿಯನ್, ಬಿಗ್ ಇವೆಂಟ್ಸ್, ತೋನ್ಸೆ ಪಾರ್ ಬೀಚ್ ರಿಸಾರ್ಟ್ ಸ್ಪಾ, ರಿಯಾ ಟ್ರಾವೆಲ್ಸ್ ಟೂರ್ಸ್‌, ಓಲು ರೂವ್ಸ್, ಪ್ರಕೃತಿ ಹೋವ್ ಸ್ಟೇ, ಕ್ಷೇಮಧಾಮ ಆಯುರ್ವೇದಿಕ್ ಹಾಸ್ಪಿಟಲ್, ಚಿತ್ರಕೂಟದ ಆಯುರ್ವೇದ ಹೆಲ್ತ್ ಸ್ಟೇ, ಪರ್ಣಕುಟಿ ಹೋಮ್ ಸ್ಟೇ, ಬೀಚ್ ಕ್ಯಾಸಲ್ ಗೆಸ್ಟ್ ಹೌಸ್ ಮತ್ತಿತರ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಸಂಸ್ಥೆಗಳು ಭಾಗವಹಿಸಲಿವೆ.

ಜಾಗತಿಕ, ಭಾರತೀಯ ಪ್ರವಾಸೋದ್ಯಮ ಮತ್ತು ಸ್ಥಳೀಯ ಪ್ರವಾಸೋದ್ಯಮ ಗಳ ಬಗ್ಗೆ ಮಾಹಿತಿ, ರಜಾಕಾಲೀನ ಪ್ರವಾಸಗಳ ಮಾಹಿತಿ, ತಂಡ ಪ್ರವಾಸಗಳು, ಶೈಕ್ಷಣಿಕ ಪ್ರವಾಸಗಳು, ಯಾತ್ರೆ ಮತ್ತಿತರ ವಿಷಯಗಳ ಕುರಿತು ಪ್ರವಾಸಪ್ರಿಯ ರಿಗೆ ಸೂಕ್ತ ಮಾಹಿತಿ ಈ ಎಕ್ಸಿಬಿಷನ್‌ನಲ್ಲಿ ಲಭ್ಯವಾಗಲಿವೆ.

ನ.15 ರಿಂದ 17ರ ತನಕ ಪೂರ್ವಾಹ್ನ 11ಗಂಟೆಯಿಂದ ಸಂಜೆ 7:30ರ ತನಕ ಈ ಪ್ರದರ್ಶನ ತೆರೆದಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಅವಿಭಜಿತ ದ.ಕ. ಜಿಲ್ಲೆ ಮತ್ತು ಪರವೂರ ಪ್ರವಾಸಪ್ರಿಯರು ಈ ಅಭೂತ ಪೂರ್ವ ಎಕ್ಸಿಬಿಷನ್‌ನ ಸದುಪಯೋಗ ಪಡೆಯಬೇಕೆಂದು ಐ.ಐ.ಟಿ.ಇ.ಯ ನಿರ್ದೇಶಕ ಅನುರಾಗ್ ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News