ಸೀರತ್ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Update: 2019-11-13 14:28 GMT

ಉಡುಪಿ, ನ.13: ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಶಾಖೆಯ ವತಿಯಿಂದ ಸೀರತ್ ಪ್ರಯುಕ್ತ ಇಂದು ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ರೋಗಿಗಳಿಗೆ ಹಣ್ಣುಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಮಾಅತೆ ಇಸ್ಲಾಮೀ ಹಿಂದ್‌ನ ಸಮಾಜ ಸೇವಾ ವಿಭಾಗದ ಸದಸ್ಯ ಅಬ್ದುಲ್ ಅಝೀಝ್ ಉದ್ಯಾವರ್ ಮಾತನಾಡಿ, ಪ್ರವಾದಿ ಮುಹಮ್ಮದ್ (ಸ) ಈ ಜಗತ್ತಿಗೆ ಬಂದು ಸಾವಿರದ ನಾಲ್ನೂರು ವರ್ಷಗಳು ಕಳೆದರೂ ಅವರು ಕಲಿಸಿ ಕೊಟ್ಟ ಸಂದೇಶ ಮಾತ್ರ ಇಂದಿಗೂ ಜೀವಂತವಾಗಿಯೇ ಉಳಿದಿದೆ. ಅದರ ಒಂದು ಭಾಗ ಈ ರೋಗಿ ಸಂದರ್ಶನ ಎಂದು ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಶಾಖೆಯ ಕಾರ್ಯದರ್ಶಿ ನಿಸಾರ್ ಕಟಪಾಡಿ, ಸಮಾಜ ಸೇವಾ ಘಟಕದ ಇಸ್ಹಾಕ್ ಹೂಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಶಾಹಿದಾ ರಿಯಾಝ್, ಕಾರ್ಯಕರ್ತರಾದ ಅಬ್ದುಲ್ ಅಝೀಜ್ ಆದಿಉಡುಪಿ, ರಿಯಾಝ್ ಅಹ್ಮದ್, ರಹೀಸ್, ಮೆಹರುನ್ನಿಸಾ ಮಣಿಪಾಲ್, ಅರಫತ್ ದಾವೂದ್, ಇಕ್ಬಾಲ್ ಮನ್ನ, ಎಸ್‌ಐಓ ಜಿಲ್ಲಾ ಕಾರ್ಯದರ್ಶಿ ಶಾರೂಕ್ ತೀರ್ಥಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News