ನ.15: ದಾರುಸ್ಸಲಾಂ ಅಕಾಡಮಿಯ ಮೊದಲ ಅಂತಸ್ತಿನ ಕಟ್ಟಡ ಉದ್ಘಾಟನೆ

Update: 2019-11-13 14:54 GMT

ಮಂಗಳೂರು, ನ.13: ದೇರಳಕಟ್ಟೆ ಸಮೀಪದ ಕಿನ್ಯದ ಶಂಸುಲ್ ಉಲಮಾ ದಾರುಸ್ಸಲಾಮ್ ಅಕಾಡಮಿಯ ವಿದ್ಯಾಭ್ಯಾಸ ಕೇಂದ್ರದ ಮೊದಲ ಅಂತಸ್ತಿನ ಕಟ್ಟಡದ ಉದ್ಘಾಟನೆ ಹಾಗೂ ಮಾಸಿಕ ಮಜ್ಲಿಸುನ್ನೂರ್ ಮತ್ತು ಮೀಲಾದುನ್ನಬಿ ಆಚರಣೆಯು ನ.15ರಂದು ಸಂಜೆ 4:30ಕ್ಕೆ ಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಆಯೋಜಿಸಲಾಗಿದೆ ಎಂದು ಅಕಾಡಮಿಯ ಕೋಶಾಧಿಕಾರಿ ಅಬುಸಾಲಿಮ್ ತಿಳಿಸಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು ಎಸ್‌ಡಿಎ ವಾದಿತ್ತೈಬ ಅಧ್ಯಕ್ಷ ಸೈಯದ್ ಅಮೀರ್ ತಂಳ್ ಅಲ್ ಬುಕಾರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಎಸ್‌ಡಿಎ ವಾದಿತ್ತೈಬ ಪ್ರಾಂಶುಪಾಲ ಸೈಯದ್ ಇಬ್ರಾಹಿಂ ಬಾತಿಷ್ ತಂಳ್ ಅಧ್ಯಕ್ಷತೆ ವಹಿಸುವರು. ಮುಖ್ಯ ಪ್ರಭಾಷಣಕಾರರಾಗಿ ಕೌನ್ಸಿಲರ್ ಆ್ ಸಿಐಸಿ ಇಕ್ಬಾಲ್ ವಾಫಿ ವೇಂರ ಮತ್ತು ರಿಯಾಝ್ ರಹ್ಮಾನಿ ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಅಮೀರ್ ತಂಳ್ ಕಿನ್ಯ, ಸಿರಾಜುದ್ದೀನ್, ಬಿ.ಎಂ.ಇದ್ದಿನ್ ಕುಂಞಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News