ಎಫ್‌ಎಂಆರ್‌ಎಐ ರಾಜ್ಯಮಟ್ಟದ ಜಾಥ ಉಡುಪಿಗೆ ಆಗಮನ

Update: 2019-11-13 16:05 GMT

ಉಡುಪಿ, ನ.13: ಕರ್ನಾಟಕ ಸ್ಟೇಟ್ ಮೆಡಿಕಲ್ ಅಂಡ್ ಸೇಲ್ಸ್ ರೆಪ್ರೆ ಸೆಂಟಿವ್ ಅಸೋಸಿಯೇಷನ್(ಎಫ್‌ಎಂಆರ್‌ಎಐ ಮತ್ತು ಸಿಐಟಿಯು) ರಾಜ್ಯ ಮಟ್ಟದ ಜಾಥ ಇಂದು ಉಡುಪಿ ಜಿಲ್ಲೆಗೆ ಆಗಮಿಸಿತು.

ಜಾಥವನ್ನು ಸಿಐಟಿಯು ಜಿಲ್ಲಾ ಸಮಿತಿ ಹಾಗೂ ಔಷಧಿ ಮತ್ತು ಮಾರಾಟ ಪ್ರತಿನಿಧಿಗಳ ಉಡುಪಿ ಜಿಲ್ಲಾ ಸಮಿತಿಯಿಂದ ಸ್ವಾಗತಿಸಲಾಯಿತು. ಎಫ್‌ಎಂ ಆರ್‌ಎಐ ಜಿಲ್ಲಾ ಮುಖಂಡರಾದ ಪ್ರಸನ್ನ, ರಾಜ್ಯ ಮುಖಂಡರಾದ ಜೈ ಗಣೇಶ್, ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ, ಕವಿರಾಜ್, ಶಶಿಧರ ಗೊಲ್ಲ ಮಾತನಾಡಿದರು.

ಔಷಧಿಗಳ ಮೇಲೆ ಜಿಎಸ್‌ಟಿ ವಿಧಿಸಬಾರದು. ಆನ್‌ಲೈನ್ ಮೂಲಕ ಔಷಧಿಗಳ ಮಾರಾಟಕ್ಕೆ ಅವಕಾಶ ನೀಡಬಾರದು. ಚಿಲ್ಲರೆ ಸರಪಳಿ ಮಳಿಗೆಗಳ ಮೂಲಕ ಔಷಧಿಗಳ ಚಿಲ್ಲರೆ ಮಾರಾಟದ ಏಕಸ್ವಾಮ್ಯ ನಿಲ್ಲಿಸಬೇಕು. ಔಷಧಿಗಳ ಮಾರಾಟ ಮತ್ತು ವ್ಯಾಪಾರದಲ್ಲಿ ಅನೈತಿಕ ಮತ್ತು ಭ್ರಷ್ಟ ಅಭ್ಯಾಸಗಳನ್ನು ನಿಲ್ಲಿಸಬೇಕು ಎಂದು ಜಾಥದಲ್ಲಿ ಆಗ್ರಹಿಸಲಾಯಿತು.

ಸಾರ್ವಜನಿಕ ವಲಯದ ಔಷಧಿ ಕಂಪೆನಿಗಳ ಪುನರುಜ್ಜೀವನ ಮಾಡಬೇಕು. ಎಲ್ಲಾ ಜನರಿಗೆ ಕೈಗೆಟಕುವ ಆರೋಗ್ಯ ರಕ್ಷಣೆ ಮಾಡಬೇಕು. ಉದ್ಯೋಗದಾತರ ಶೋಷಣೆಯಿಂದ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಕಾರ್ಮಿಕ ಕಾನೂನುಗಳು ಜಾರಿಗೆ ತರಬೇಕು. ಯುವಕರು ಮತ್ತು ನಿರುದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಭಾರತೀಯ ಆರ್ಥಿಕತೆಯನ್ನು ಪುನರು ಜ್ಜೀವನಗೊಳಿಸಬೇಕು ಎಂದು ಆಗ್ರಹಿಸ ಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News